ಎಫ್ಬಿಐ `ಮೋಸ್ಟ್ ವಾಂಟೆಡ್' ದೇಶಭ್ರಷ್ಟರ ಪಟ್ಟಿಯಲ್ಲಿ ಗುಜರಾತ್ ವ್ಯಕ್ತಿ

ಚೇತನ್ ಭಾಯ್ ಪಟೇಲ್ | PC : NDTV
ನ್ಯೂಯಾರ್ಕ್ : ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ನ(ಎಫ್ಬಿಐ) 10 ಮೋಸ್ಟ್ ವಾಂಟೆಡ್ ದೇಶಭ್ರಷ್ಟರ ಪಟ್ಟಿಯಲ್ಲಿರುವ ಭಾರತದ ಭದ್ರೇಶ್ ಕುಮಾರ್ ಚೇತನ್ ಭಾಯ್ ಪಟೇಲ್ ಬಂಧನಕ್ಕಾಗಿ ಪ್ರಯತ್ನ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2015ರಲ್ಲಿ ಅಮೆರಿಕದಲ್ಲಿ ತನ್ನ ಪತ್ನಿಯನ್ನು ಕೊಲೆಗೈದ ಬಳಿಕ 34 ವರ್ಷದ ಗುಜರಾತ್ ಮೂಲದ ಪಟೇಲ್ ನಾಪತ್ತೆಯಾಗಿದ್ದಾನೆ. ಶಸ್ತ್ರಾಸ್ತ್ರ ಹೊಂದಿರುವ ಈತ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದ್ದು ಈತನ ಬಗ್ಗೆ ಮಾಹಿತಿ ಒದಗಿಸುವಂತೆ ಎಫ್ಬಿಐ ಕೋರಿದೆ.
Next Story