ಕೆನಡಾದಲ್ಲಿ ಏರ್ ಇಂಡಿಯಾ ವಿಮಾನಗಳಿಗೆ ಮುತ್ತಿಗೆ ಹಾಕಲು ಕರೆ ನೀಡಿದ ಗುರ್ಪತ್ವಂತ್ ಸಿಂಗ್ ಪನ್ನೂನ್!
ಗುರ್ಪತ್ವಂತ್ ಸಿಂಗ್ | Photo: NDTV
ಟೊರಂಟೊ: ಕೆನಡಾದ ಟೊರಂಟೊ ಮತ್ತು ವ್ಯಾಂಕೋವರ್ ವಿಮಾನ ನಿಲ್ದಾಣಗಳಿಂದ ಹೊರಹೋಗುವ ಏರ್ ಇಂಡಿಯಾ ವಿಮಾನಗಳಿಗೆ ಡಿ. 1ರಂದು ಮುತ್ತಿಗೆ ಹಾಕುವಂತೆ ಪ್ರತ್ಯೇಕತಾವಾದಿ ಗುಂಪು `ಸಿಖ್ಸ್ ಫಾರ್ ಜಸ್ಟಿಸ್(SFJ)' ಖಾಲಿಸ್ತಾನ್ ಪರ ಸಂಘಟನೆಗಳಿಗೆ ಕರೆ ನೀಡಿದೆ.
ಏರ್ ಇಂಡಿಯಾದ ಕಾರ್ಯನಿರ್ವಹಣೆ ಸಿಖ್ ಜನರಿಗೆ ನಿರಂತರ ತೊಂದರೆಯಾಗುವುದರಿಂದ ಕೆನಡಾ ವಿಮಾನನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಬೇಕು ಎಂದು ಎಸ್ಎಫ್ಜೆ ಪ್ರಧಾನ ಕಾರ್ಯದರ್ಶಿ ಗುರ್ಪತ್ವಂತ್ ಸಿಂಗ್ ಪನ್ನೂನ್ ಆಗ್ರಹಿಸಿದ್ದಾನೆ. ಪನ್ನೂನ್ ಮತ್ತು ಎಸ್ಎಫ್ಜೆ ವಿರುದ್ಧ ಭಾರತದ ರಾಷ್ಟ್ರೀಯ ತನಿಖಾ ದಳ() ಐಪಿಸಿ ಹಾಗೂ ಅಕ್ರಮ ಕೃತ್ಯ ನಡೆ ಕಾಯ್ದೆಯಡಿ ನವೆಂಬರ್ 20ರಂದು ಪ್ರಕರಣ ದಾಖಲಿಸಿದ ಬೆನ್ನಲ್ಲೇ ಪನ್ನೂನ್ ಈ ಹೇಳಿಕೆ ನೀಡಿದ್ದಾನೆ. `ಪನ್ನೂನ್ ಹಾಕಿರುವ ಬೆದರಿಕೆ ಹಾಗೂ ಪ್ರತಿಪಾದನೆಗಳು ಕೆನಡಾ, ಭಾರತ ಮತ್ತು ಏರ್ ಇಂಡಿಯಾ ಹಾರಾಟ ನಡೆಸುವ ಇತರ ದೇಶಗಳಲ್ಲಿ ಭದ್ರತಾ ಪಡೆಗಳ ತನಿಖೆಯ ಜತೆಗೆ ಗರಿಷ್ಟ ಎಚ್ಚರಿಕೆಯ ಅಗತ್ಯವನ್ನು ಹೆಚ್ಚಿಸಿದೆ' ಎಂದು ಎನ್ಐಎ ಹೇಳಿದೆ. NIA
ಕೆನಡಾದಲ್ಲಿನ ಭಾರತದ ಹೈಕಮಿಷನ್ ಈ ವಿಷಯವನ್ನು ಕೆನಡಾ ಸರಕಾರದ ಗಮನಕ್ಕೆ ತಂದಿದ್ದು ಈ ವಿಷಯದ ಬಗ್ಗೆ ಕೆನಡಾ ಪೊಲೀಸ್ ಇಲಾಖೆ ಹಾಗೂ ಕೆನಡಾದ ಸಾರಿಗೆ ಇಲಾಖೆ ತನಿಖೆ ನಡೆಸುತ್ತಿದೆ ಎಂದು ಉನ್ನತ ಮೂಲಗಳು ಹೇಳಿವೆ.
Next Story