ಸೇನಾ ಕಾರ್ಯಾಚರಣೆ ತಕ್ಷಣವೇ ಸ್ಥಗಿತಕ್ಕೆ ಇಸ್ರೇಲ್ಗೆ ಗುಟೆರಸ್ ಆಗ್ರಹ
ವಿಶ್ವಸಂಸ್ಥೆಯ ಪ್ರಧಾನಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ | PC : PTI
ನ್ಯೂಯಾರ್ಕ್ : ಯುದ್ಧದಿಂದ ಜರ್ಝರಿತವಾಗಿರುವ ಗಾಝಾದಲ್ಲಿ ತಕ್ಷಣವೇ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕೆಂದು ವಿಶ್ವಸಂಸ್ಥೆಯ ಪ್ರಧಾನಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರು ಇಸ್ರೇಲ್ಗೆ ಕರೆ ನೀಡಿದ್ದಾರೆ. ಗಾಝಾದಲ್ಲಿ ನೆಲೆಸಿರುವ ಸ್ಫೋಟಕ ಪರಿಸ್ಥಿತಿಯನ್ನು ಇಸ್ರೇಲ್ ಕಾರ್ಯಾಚರಣೆಯು ಇನ್ನಷ್ಟು ವಿಷಮಗೊಳಿಸಿದೆ ಎಂದು ಅದು ಕಳವಳ ವ್ಯಕ್ತಪಡಿಸಿದೆ.
ಗಾಝಾದಲ್ಲಿ ಗರಿಷ್ಠವಾದ ಸಂಯಮವನ್ನು ವಹಿಸುವಂತೆ ಹಾಗೂ ಅನಿವಾರ್ಯವಾದ ಸನ್ನಿವೇಶಗಳಲ್ಲಿ ಮಾತ್ರವೇ ಮಾರಕಾಯುಧಗಳನ್ನು ಬಳಸುವಂತೆ ಅವರು ಇಸ್ರೇಲಿ ಪಡೆಗಳಿಗೆ ಆಗ್ರಹಿಸಿದ್ದಾರೆ.
ಈ ಮಧ್ಯೆ ಪಶ್ಚಿಮದಂಡೆಯಲ್ಲಿ ಇಸ್ರೇಲ್ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ಆ ದೇಶಕ್ಕೆ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ತಕ್ಷಣವೇ ನಿಲ್ಲಿಸಬೇಕು, ಎಂದು ಬ್ರಿಟಿಶ್ ಸಂಸತ್ ಸದಸ್ಯ ಹಾಗೂ ಲೇಬರ್ ಪಕ್ಷದ ಮಾಜಿ ನಾಯಕ ಜೆರ್ಮಿ ಕೊರ್ಬೆನ್ ಅವರು ಬ್ರಿಟನ್ ಸರಕಾರವನ್ನು ಆಗ್ರಹಿಸಿದ್ದಾರೆ.
Next Story