ಒಪ್ಪಂದಕ್ಕೆ ಬದ್ಧ: ಇಸ್ರೇಲ್ ಕೂಡಾ ಇದನ್ನು ಗೌರವಿಸಬೇಕು; ಹಮಾಸ್
Photo credit: PTI
ಗಾಝಾ : ಗಾಝಾದಲ್ಲಿ ಜಾರಿಯಲ್ಲಿರುವ ಕದನ ವಿರಾಮದ ಒಪ್ಪಂದದ ಅನುಷ್ಠಾನಕ್ಕೆ ಸಂಬಂಧಿಸಿದ ಬಿಕ್ಕಟ್ಟನ್ನು ನಿವಾರಿಸಲು ಸಮಾಲೋಚಕರು ಮುಂದಾಗಿರುವಂತೆಯೇ, ಒಪ್ಪಂದಕ್ಕೆ ತಾನು ಬದ್ಧ ಎಂದು ಹಮಾಸ್ ಗುರುವಾರ ಹೇಳಿದೆ.
ಕದನ ವಿರಾಮವನ್ನು ಕಾರ್ಯಗತಗೊಳಿಸಲು ನಾವು ಉತ್ಸುಕರಾಗಿದ್ದೇವೆ ಮತ್ತು ಇಸ್ರೇಲ್ ಕೂಡಾ ಇದನ್ನು ಪೂರ್ಣಪ್ರಮಾಣದಲ್ಲಿ ಗೌರವಿಸಬೇಕೆಂದು ಬಯಸುತ್ತೇವೆ. ಒಪ್ಪಂದದ ಸಂಪೂರ್ಣ ಅನುಷ್ಠಾನವನ್ನು ಪೂರ್ಣಗೊಳಿಸಲು ಮತ್ತು ಶನಿವಾರ ವಿನಿಮಯ ಪ್ರಕ್ರಿಯೆ ಮುಂದುವರಿಸಲು ಸಮಾಲೋಚಕರು(ಕದನ ವಿರಾಮ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವವರು) ಇಸ್ರೇಲ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹಮಾಸ್ ಹೇಳಿದೆ.
Next Story