ಇಸ್ರೇಲಿ ಒತ್ತೆಯಾಳುಗಳ ಮೃತದೇಹ ಹಸ್ತಾಂತರಿಸಿದ ಹಮಾಸ್

Photo Credit | timesofindia
ಗಾಝಾ: ಗಾಝಾದಲ್ಲಿ ಒತ್ತೆಸೆರೆಯಲ್ಲಿದ್ದ ನಾಲ್ವರು ಇಸ್ರೇಲಿಗಳ ಮೃತದೇಹವನ್ನು ಹಮಾಸ್ ಗುರುವಾರ ರೆಡ್ಕ್ರಾಸ್ಗೆ ಹಸ್ತಾಂತರಿಸಿರುವುದಾಗಿ ಇಸ್ರೇಲ್ನ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.
ಇದೇ ಸಂದರ್ಭ ಇಸ್ರೇಲ್ನ ಒಫರ್ ಜೈಲಿನಿಂದ ಬಿಡುಗಡೆಗೊಳ್ಳಲಿರುವ ಫೆಲೆಸ್ತೀನ್ ಕೈದಿಗಳನ್ನು ಕರೆದೊಯ್ಯಲು ರೆಡ್ಕ್ರಾಸ್ನ ವಾಹನಗಳು ಸಿದ್ಧವಾಗಿದೆ . ಇಸ್ರೇಲ್ ಬಿಡುಗಡೆಗೊಳಿಸುವ ಕೈದಿಗಳಲ್ಲಿ ಮಹಿಳೆಯರು ಮತ್ತು ಹದಿಹರೆಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ನಿರೀಕ್ಷೆಯಿದೆ. ಈ ಹಸ್ತಾಂತರ ಪ್ರಕ್ರಿಯೆಯೊಂದಿಗೆ ಕದನ ವಿರಾಮದ ಮೊದಲ ಹಂತದಡಿ ಉಭಯ ಕಡೆಯವರ ಜವಾಬ್ದಾರಿ ಪೂರ್ಣಗೊಳ್ಳಲಿದೆ.
ಮೊದಲ ಹಂತದಲ್ಲಿ ಹಮಾಸ್ 33 ಒತ್ತೆಯಾಳುಗಳನ್ನು(8 ಮೃತದೇಹ) ಮತ್ತು ಇಸ್ರೇಲ್ ಸುಮಾರು 2000 ಫೆಲೆಸ್ತೀನಿಯನ್ ಕೈದಿಗಳನ್ನು ಬಿಡುಗಡೆಗೊಳಿಸಿವೆ.
Next Story