ಬಿಡುಗಡೆಗೊಂಡ ಒತ್ತೆಯಾಳುಗಳಿಗೆ ಹಮಾಸ್ `ಪ್ರಮಾಣ ಪತ್ರ'

PC : NDTV
ಗಾಝಾ : ಗಾಝಾ ಕದನ ವಿರಾಮ ಒಪ್ಪಂದದ ಅನುಸಾರ ರವಿವಾರ ಹಮಾಸ್ ಒತ್ತೆಸೆರೆಯಿಂದ ಬಿಡುಗಡೆಗೊಂಡ ಮೂವರು ಇಸ್ರೇಲಿ ಒತ್ತೆಯಾಳುಗಳಿಗೆ 15 ತಿಂಗಳ ಸೆರೆವಾಸದ `ಸ್ಮರಣಾರ್ಥ' ಹಮಾಸ್ ಉಡುಗೊರೆ ಬ್ಯಾಗ್ಗಳನ್ನು ನೀಡಿರುವುದಾಗಿ ವರದಿಯಾಗಿದೆ.
ವರದಿಗಳ ಪ್ರಕಾರ, ಹಮಾಸ್ನ ಲಾಂಛನವಿರುವ ಈ ಉಡುಗೊರೆ ಬ್ಯಾಗ್ಗಳಲ್ಲಿ ಅವರು ಬಂಧನದಲ್ಲಿದ್ದ ಫೋಟೋ, ಗಾಝಾದ ಫೋಟೊ ಮತ್ತು `ಬಿಡುಗಡೆಯ ಪ್ರಮಾಣ ಪತ್ರ'ವಿತ್ತು. ಮೂವರೂ ಒತ್ತೆಯಾಳುಗಳು ತಮ್ಮ ಬ್ಯಾಗ್ಗಳನ್ನು ಹಿಡಿದುಕೊಂಡು ನಗುತ್ತಾ ಫೋಟೋಗೆ ಫೋಸ್ ನೀಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Next Story