ಸಿರಿಯಾಕ್ಕೆ 2000 ಹೋರಾಟಗಾರರನ್ನು ಕಳುಹಿಸಿದ ಹಿಜ್ಬುಲ್ಲಾ ಗುಂಪು
PC : PTI
ಬೈರೂತ್ : ಸಿರಿಯಾಕ್ಕೆ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪು 2,000 ಹೋರಾಟಗಾರರನ್ನು ರವಾನಿಸಿದೆ ಎಂದು ವರದಿಯಾಗಿದೆ.
ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪು 2011ರಿಂದಲೂ ಸಿರಿಯಾ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅವರ ಪಡೆಗಳನ್ನು ಬೆಂಬಲಿಸುತ್ತಿದೆ. `ಲೆಬನಾನ್ ಗಡಿಯ ಸನಿಹದಲ್ಲಿರುವ ಸಿರಿಯಾದ ಕುಸಾಯರ್ ಪ್ರದೇಶಕ್ಕೆ 2000 ಹೋರಾಟಗಾರರನ್ನು ರವಾನಿಸಲಾಗಿದೆ' ಎಂದು ಹಿಜ್ಬುಲ್ಲಾ ಉನ್ನತ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
Next Story