ಭಾರತೀಯ ಪ್ರತಿಭಟನಾಕಾರರ ಕತ್ತು ಸೀಳುವ ಸನ್ನೆ ಮಾಡಿದ ಪಾಕ್ ರಾಜತಾಂತ್ರಿಕ ಸಿಬ್ಬಂದಿ

PC : X \ @san_x_m
ಲಂಡನ್: ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಲಂಡನ್ ನಲ್ಲಿ ಪಾಕಿಸ್ತಾನದ ಹೈಕಮಿಷನ್ ಎದುರು ಪ್ರತಿಭಟನೆ ನಡೆಸುತ್ತಿದ್ದವರನ್ನು ಉದ್ದೇಶಿಸಿ ಪಾಕಿಸ್ತಾನ ಸೇನೆಯ ಉನ್ನತ ಅಧಿಕಾರಿಯೊಬ್ಬರು ಕತ್ತು ಸೀಳುವ ಸನ್ನೆ ಮಾಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಲಂಡನ್ ನಲ್ಲಿ ಪಾಕಿಸ್ತಾನದ ಹೈಕಮಿಷನ್ ಎದುರು ಭಾರತೀಯ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದರು. ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಪ್ರತಿಭಟನಾಕಾರರು ಪಾಕಿಸ್ತಾನ ಭಯೋತ್ಪಾದಕರನ್ನು ಬೆಂಬಲಿಸುತ್ತಿದೆ ಎಂದು ಟೀಕಿಸಿ ಘೋಷಣೆ ಕೂಗಿದರು. ಆಗ ಹೈಕಮಿಷನ್ ನಲ್ಲಿ ಪಾಕಿಸ್ತಾನ ಸೇನಾ ಸಲಹೆಗಾರ ಕರ್ನಲ್ ತೈಮೂರ್ ರಾಹತ್ ಕೈಯಲ್ಲಿ ಅಭಿನಂದನ್ ಫೋಟೋ ಹಿಡಿದುಕೊಂಡು ಪ್ರತಿಭಟನಾಕಾರರನ್ನು ಉದ್ದೇಶಿಸಿ ಕತ್ತು ಸೀಳುವ ಸನ್ನೆ ಮಾಡಿದ್ದಾರೆ. ಪಾಕ್ ರಾಯಭಾರಿ ಕಚೇರಿಯ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ಈ ರೀತಿಯ ವರ್ತನೆ ತೋರಿರುವುದಕ್ಕೆ ವ್ಯಾಪಕ ಖಂಡನೆ, ಟೀಕೆ ವ್ಯಕ್ತವಾಗಿದೆ.
Next Story