ಗಾಝಾದ ಮೇಲಿನ ಬಾಂಬ್ದಾಳಿ ನಿಲ್ಲಿಸಿದರೆ ಒತ್ತೆಯಾಳುಗಳ ಬಿಡುಗಡೆ: ಹಮಾಸ್
Photo: PTI
ಗಾಝಾ: ಇಸ್ರೇಲ್ ಸೇನೆ ಗಾಝಾ ಪ್ರದೇಶದ ಮೇಲೆ ನಡೆಸುತ್ತಿರುವ ನಿರಂತರ ಬಾಂಬ್ ದಾಳಿಯನ್ನು ನಿಲ್ಲಿಸಿದರೆ ಹಮಾಸ್ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಸಿದ್ಧ ಎಂದು ಹಮಾಸ್ನ ಸ್ಥಾಪಕ ಖಾಲಿದ್ ಮೆಶಾಲ್ ಹೇಳಿದ್ದಾರೆ.
`ಅವರು ಆಕ್ರಮಣವನ್ನು ಅಂತ್ಯಗೊಳಿಸಲಿ. ಆಗ ಖತರ್, ಈಜಿಪ್ಟ್ , ಅರಬ್ ದೇಶಗಳು ಹಾಗೂ ಇತರರ ಮಧ್ಯಸ್ಥಿಕೆಯಿಂದ ಒತ್ತೆಯಾಳುಗಳ ಬಿಡುಗಡೆಗೆ ದಾರಿ ಹುಡುಕಬಹುದಾಗಿದೆ ಎಂದು ಹಮಾಸ್ನ ರಾಜಕೀಯ ವಿಭಾಗದ ಮುಖ್ಯಸ್ಥರಾಗಿರುವ ಮೆಶಾಲ್ ಹೇಳಿರುವುದಾಗಿ `ಸ್ಕೈ ನ್ಯೂಸ್' ವರದಿ ಮಾಡಿದೆ.
Next Story