ಇಸ್ರೇಲ್ ನತ್ತ ಹೌದಿಗಳ ಕ್ಷಿಪಣಿ ದಾಳಿ
ಸಾಂದರ್ಭಿಕ ಚಿತ್ರ
ಸನಾ : ಗುರುವಾರ ರಾತ್ರಿ ಯೆಮನ್ನದ ಹೌದಿ ಸಶಸ್ತ್ರ ಹೋರಾಟಗಾರರ ಗುಂಪು ಇಸ್ರೇಲ್ನದತ್ತ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪ್ರಯೋಗಿಸಿದ್ದು ಅದನ್ನು ಇಸ್ರೇಲ್ನೆ ವಾಯು ರಕ್ಷಣಾ ವ್ಯವಸ್ಥೆ ತುಂಡರಿಸಿದೆ ಎಂದು ವರದಿಯಾಗಿದೆ.
ಕ್ಷಿಪಣಿ ದಾಳಿಯ ಬೆನ್ನಲ್ಲೇ ಮಧ್ಯ ಇಸ್ರೇಲ್ನಾವದ್ಯಂತ ಸೈರನ್ಗಎಳು ಮೊಳಗಿದ್ದು ಜನರು ಬಾಂಬ್ ನಿರೋಧಕ ಶೆಲ್ಟರ್ ಕಡೆಗೆ ಧಾವಿಸಿದರು. ದೀರ್ಘ ಶ್ರೇಣಿಯ ರಕ್ಷಣಾ ವ್ಯವಸ್ಥೆಯಿಂದ ಕ್ಷಿಪಣಿಯನ್ನು ದೇಶದ ಗಡಿಭಾಗದ ಹೊರಗೆ ತುಂಡರಿಸಲಾಗಿದೆ. ತುಂಡರಿಸಿದ ಕ್ಷಿಪಣಿಯ ಚೂರುಗಳು ಜನವಸತಿ ಪ್ರದೇಶದ ಮೇಲೆ ಬೀಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸೈರನ್ಗಶಳನ್ನು ಮೊಳಗಿಸಲಾಗಿದೆ. ಸೈರನ್ ಮೊಳಗಿದಾಗ ಶೆಲ್ಟರ್ ನಡಿ ಧಾವಿಸುವ ಧಾವಂತದಲ್ಲಿ ಕನಿಷ್ಠ 18 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಇಸ್ರೇಲ್ ಭದ್ರತಾ ಪಡೆಯ ಅಧಿಕಾರಿಗಳನ್ನು ಉಲ್ಲೇಖಿಸಿ `ಜೆರುಸಲೇಂ ಪೋಸ್ಟ್' ವರದಿ ಮಾಡಿದೆ.
ಇಸ್ರೇಲ್ ಪಡೆಗಳು ಗುರುವಾರ ಬೈರೂತ್ನ್ಲ್ಲಿ ಹಿಜ್ಬುಲ್ಲಾ ಡ್ರೋನ್ ಘಟಕದ ಕಮಾಂಡರ್ ಮುಹಮ್ಮದ್ ಸ್ರೂರ್ರತನ್ನು ಹತ್ಯೆ ಮಾಡಿರುವುದಕ್ಕೆ ಪ್ರತೀಕಾರ ದಾಳಿ ಇದಾಗಿದೆ ಎಂದು ಹೌದಿ ಮೂಲಗಳನ್ನು ಉಲ್ಲೇಖಿಸಿ ಯೆಮನ್ನಾ ಸರಕಾರಿ ಸ್ವಾಮ್ಯದ `ಸಬಾ ಸುದ್ದಿಸಂಸ್ಥೆʼ ವರದಿ ಮಾಡಿದೆ.