ಅಮೆರಿಕ ದಾಳಿಯಲ್ಲಿ ಹೌದಿ ಭದ್ರತಾ ಮುಖ್ಯಸ್ಥ ಮೃತ್ಯು: ವರದಿ

ವಾಷಿಂಗ್ಟನ್: ಯೆಮನ್ ನ ಹೌದಿ ಬಂಡುಕೋರ ಗುಂಪನ್ನು ಗುರಿಯಾಗಿಸಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಹೌದಿಗಳ ಭದ್ರತಾ ಮುಖ್ಯಸ್ಥ ಅಬ್ದುಲ್‍ಮಲಿಕ್ ಅಲ್-ಹೌದಿ ಸಾವನ್ನಪ್ಪಿರುವುದಾಗಿ ಸೌದಿ ಅರೆಬಿಯಾದ ಟಿವಿ ಚಾನೆಲ್ ಅಲ್-ಹದಾತ್ ವರದಿ ಮಾಡಿದೆ.
ಯೆಮನ್ ನ ಸಾಡಾ ನಗರದ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಅಬ್ದುಲ್‍ಮಲಿಕ್ ಅಲ್-ಹೌದಿ ಹತರಾಗಿರುವುದಾಗಿ ಅಲ್-ಹದಾತ್ ವರದಿ ಹೇಳಿದೆ. ಅಮೆರಿಕದ ವೈಮಾನಿಕ ದಾಳಿಯಲ್ಲಿ ಹೌದಿಗಳ ಹಲವು ನಾಯಕರನ್ನು ಹತ್ಯೆ ಮಾಡಲಾಗಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಸ್‍ರನ್ನು ಉಲ್ಲೇಖಿಸಿ `ಎಬಿಸಿ ' ಸೋಮವಾರ ವರದಿ ಮಾಡಿದೆ. ಹೌದಿ ಬಂಡುಕೋರರು ಅಮೆರಿಕದ ಆಸ್ತಿಗಳನ್ನು ಹಾಗೂ ಜಾಗತಿಕ ನೌಕಾಯಾನವನ್ನು ಗುರಿಯಾಗಿಸಿದ ದಾಳಿಯನ್ನು ನಿಲ್ಲಿಸುವವರೆಗೆ ಹೌದಿಗಳ ವಿರುದ್ಧ ಅಮೆರಿಕ `ಪಟ್ಟುಹಿಡಿದ ದಾಳಿ'ಯನ್ನು ಮುಂದುವರಿಸುತ್ತದೆ ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆಥ್ ಹೇಳಿದ್ದಾರೆ.
Next Story