ಫ್ರಾನ್ಸ್ ಸರ್ಕಾರದ ವಿರುದ್ಧ ಅವಿಶ್ವಾಸಮತ ಅಂಗೀಕಾರ; ಪ್ರಧಾನಿ ರಾಜೀನಾಮೆ ಅನಿವಾರ್ಯ
Photo: https://x.com/MichelBarnier
ಪ್ಯಾರೀಸ್: ಫ್ರಾನ್ಸ್ ಸಂಸದರು ಬುಧವಾರ ಅಲ್ಲಿನ ಸರ್ಕಾರದ ವಿರುದ್ಧ ಐತಿಹಾಸಿಕ ಅವಿಶ್ವಾಸ ನಿರ್ಣಯವನ್ನು ಆಂಗೀಕರಿಸಿದ್ದು, ಪ್ರಧಾನಿ ಮೈಕೆಲ್ ಬರ್ನೆರ್ ಮತ್ತು ಅವರ ಸಂಪುಟ ರಾಜೀನಾಮೆ ನೀಡುವುದು ಅನಿವಾರ್ಯವಾಗಿದೆ. 1962ರ ಬಳಿಕ ಫ್ರಾನ್ಸ್ ನಲ್ಲಿ ಅವಿಶ್ವಾಸ ನಿರ್ಣಯದ ಹಿನ್ನೆಲೆಯಲ್ಲಿ ಸರ್ಕಾರ ಪತನವಾಗುತ್ತಿರುವ ಮೊದಲ️ ನಿದರ್ಶನ ಇದಾಗಿದೆ. ಬಜೆಟ್ ವ್ಯಾಜ್ಯದ ಹಿನ್ನೆಲೆಯಲ್ಲಿ ಬಲ️ಪಂಥೀಯ ಹಾಗೂ ಎಡಪಂಥೀಯ ಸಂಸದರು ಒಗ್ಗಟ್ಟಾಗಿ ಈ ಅವಿಶ್ವಾಸ ನಿರ್ಣಯ ಅಂಗೀಕರಿಸಿದ್ದು, ಯೂರೋಪಿಯನ್ ಒಕ್ಕೂಟದ ಎರಡನೇ ಅತಿದೊಡ್ಡ ಆರ್ಥಿಕತೆ ಎನಿಸಿರುವ ಫ್ರಾನ್ಸ್ ನಲ್ಲಿ ಬಿ️ಕ್ಕಟ್ಟು ತಲೆದೋರಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ಪ್ರಧಾನಿಯಾಗಿ ನೇಮಕಗೊಂಡಿದ್ದ ಬರ್ನೆರ್ 1958ರಲ್ಲಿ ಐದನೇ ರಿಪಬ್ಲಿಕ್ ಅಸ್ತಿತ್ವಕ್ಕೆ ಬಂದ ಬಳಿಕ ಅತ್ಯಂತ ಕನಿಷ್ಠ ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಿದವರು ಎನಿಸಿಕೊಂಡಿದ್ದಾರೆ. ಕೇವಲ️ ಮೂರು ತಿಂಗಳಲ್ಲಿ ಅವರ ಅಲ್ಪಸಂಖ್ಯಾತ ಸರ್ಕಾರ ಬಹುಮತ ಕಳೆದುಕೊಂಡಂತಾಗಿದೆ.
ಕಳೆದ ಬೇಸಿಗೆಯಲ್ಲಿ ನಡೆದ ಮಿಂಚಿನ ಚುನಾವಣೆಯಲ್ಲಿ ದೇಶದಲ್ಲಿ ಅತಂತ್ರ ಸಂಸತ್ ನಿರ್ಮಾಣವಾಗಿದ್ದು, ಯಾವುದೇ ಪಕ್ಷಗಳು ಬಹುಮತ ಸಾಧಿಸಿರಲಿಲ್ಲ. ಆದ್ದರಿಂದ ಸರ್ಕಾರದ ಸ್ಥಿರತೆಯಲ್ಲಿ ಬಲ️ಪಂಥೀಯ ಪಕ್ಷದ ಪ್ರಭಾವ ಪ್ರಮುಖವಾಗಿತ್ತು.
ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಗುರುವಾರ ಸಂಜೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದು, ಅದಕ್ಕೂ ಮುನ್ನ ಮೈಕೆಲ್ ಬಾರ್ನೆರ್ ಅಧಿಕೃತವಾಗಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸುವ ನಿರೀಕ್ಷೆ ಇದೆ.
ಬಲ️ಪಂಥೀಯ ಮತ್ತು ಎಡಪಂಥೀಯ ಸಂಸದರು ಪ್ರಧಾನಿ ಮೈಕೆಲ್ ಬರ್ನೆರ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು 331-288 ಮತಗಳ ಅಂತರದಿಂದ ಅಂಗೀಕರಿಸಿದರು. ಗುರುವಾರ ಮುಂಜಾನೆ ಪ್ರಧಾನಿ ಹಾಗೂ ಅವರ ಸಚಿವ ಸಂಪುಟ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಧು ಫ್ರಾನ್ಸ್ ಮಾಧ್ಯಮಗಳು ಹೇಳಿವೆ.
ಫ್ರಾನ್ಸ್ ನ್ಯಾಷನಲ್ ಅಸೆಂಬ್ಲಿಯಲ್ಲಿ ಅಂದರೆ ಕೆಳಮನೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲ. ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಅವರ ಸೆಂಟ್ರಿಸ್ಟ್ ಒಕ್ಕೂಟ, ಎಡಪಂಥೀಯ ನ್ಯೂ ಪಾಪ್ಯುಲ️ರ್ ಫ್ರಂಟ್ ಮತ್ತು ಬಲ️ಪಂಥೀಯ ನ್ಯಾಷನಲ್ ರ್ಯಾಲಿ ಪ್ರಮುಖ ಪಕ್ಷಗಳಾಗಿವೆ. ತಮ್ಮ ಬಿ️ನ್ನಾಬಿ️ಪ್ರಾಯಗಳ ನಡುವೆಯೂ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸುವಲ್ಲಿ ಎರಡು ಪಕ್ಷಗಳು ಒಗ್ಗೂಡಿವೆ.