ಅಮೆರಿಕ: ಇಸ್ರೇಲ್-ಹಮಾಸ್ ನಡುವೆ ಕದನವಿರಾಮ ಆಗ್ರಹಿಸಿ ಕ್ಯಾಪಿಟೊಲ್ ಹಿಲ್ನಲ್ಲಿ ಪ್ರತಿಭಟನೆ
300 ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ
Screengrab: X/@nizamtellawi
ವಾಷಿಂಗ್ಟನ್: ಇಸ್ರೇಲ್ ಮತ್ತು ಹಮಾಸ್ ನಡುವೆ ತಕ್ಷಣ ಕದನವಿರಾಮ ಘೋಷಿಸಬೇಕೆಂದು ಆಗ್ರಹಿಸಿ ವಾಷಿಂಗ್ಟನ್ನ ಕ್ಯಾಪಿಟೊಲ್ ಹಿಲ್ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಸುಮಾರು 300 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಇಸ್ರೇಲ್ ಭೇಟಿಯ ದಿನದಂದೇ ನಡೆದ ಈ ಪ್ರತಿಭಟನೆಯು ಇಸ್ರೇಲ್ ದಾಳಿಯಿಂದ ಗಾಝಾದಲ್ಲಿ ಉಂಟಾಗಿರುವ ಅಪಾರ ಸಾವು ನೋವುಗಳತ್ತ ಬೆಳಕು ಚೆಲ್ಲಿದೆ.
ಕ್ಯಾನನ್ ಕಚೇರಿ ಕಟ್ಟಡದೊಳಗಿದ್ದ ನೂರಾರು ಪ್ರತಿಭಟನಾಕಾರರು “ಈಗ ಕದನವಿರಾಮ” ಎಂಬ ಘೋಷಣೆಗಳನ್ನು ಕೂಗಿದರಲ್ಲದೆ ಈ ಕುರಿತಂತೆ ಅಮೆರಿಕದ ಕಾಂಗ್ರೆಸ್ ಹಸ್ತಕ್ಷೇಪ ನಡೆಸಬೇಕು ಎಂದು ಆಗ್ರಹಿಸಿದೆ.
ಜುವಿಶ್ ವಾಯ್ಸ್ ಫಾರ್ ಪೀಸ್ ಸಂಸ್ಥೆಯ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದೆ.
Next Story