ಫ್ಲೋರಿಡಾಕ್ಕೆ ಅಪ್ಪಳಿಸಿದ ಚಂಡಮಾರುತ | ಕನಿಷ್ಠ 4 ಮಂದಿ ಸಾವು
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್ : ಅಮೆರಿಕದ ಫ್ಲೋರಿಡಾ ಕರಾವಳಿಗೆ ಸೋಮವಾರ ಅಪ್ಪಳಿಸಿದ ಡೆಬಿ ಚಂಡಮಾರುತದಿಂದ ವ್ಯಾಪಕ ಹಾನಿ ಸಂಭವಿಸಿದ್ದು ಕನಿಷ್ಠ 4 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಫ್ಲೋರಿಡಾದ ಲೆವಿ ನಗರದಲ್ಲಿ ಮನೆಯೊಂದರ ಮೇಲೆ ಮರ ಉರುಳಿಬಿದ್ದು 13 ವರ್ಷದ ಬಾಲಕ ಮೃತಪಟ್ಟಿದ್ದರೆ, ಹಿಲ್ಸ್ಬೊರೊ ಕೌಂಟಿಯಲ್ಲಿ ಟ್ರಕ್ ಒಂದು ಕಾಲುವೆಗೆ ಉರುಳಿಬಿದ್ದು ಚಾಲಕ ಸಾವನ್ನಪ್ಪಿದ್ದಾನೆ. ಡಿಕ್ಸೀ ನಗರದಲ್ಲಿ ಕಾರು ಅಪಘಾತದಲ್ಲಿ ಓರ್ವ ಮಹಿಳೆ, ಓರ್ವ ಬಾಲಕನ ಸಹಿತ ಮೂರು ಮಂದಿ ಮೃತಪಟ್ಟಿದ್ದಾರೆ. ಸುಂಟರಗಾಳಿಯ ಜತೆ ಬೀಸಿದ ಚಂಡಮಾರುತದಿಂದ ಭಾರೀ ಮಳೆಯಾಗುತ್ತಿದ್ದು ಹಲವೆಡೆ ವಿದ್ಯುತ್ ಲೈನ್ ತುಂಡಾಗಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ. ಫ್ಲೋರಿಡಾದ ಸುಮಾರು 2,50,000 ನಿವಾಸಿಗಳಿಗೆ ವಿದ್ಯುತ್ ಪೂರೈಕೆ ಮೊಟಕುಗೊಂಡಿದೆ . ರಕ್ಷಣಾ ಕಾರ್ಯಕ್ಕೆ ಸುಮಾರು 3000 ಸದಸ್ಯರ ವಿಶೇಷ ಕಾರ್ಯಪಡೆಯನ್ನು ಸಜ್ಜುಗೊಳಿಸಿರುವುದಾಗಿ ಗವರ್ನರ್ ರಾನ್ ಡಿಸ್ಯಾಂಟಿಸ್ ಹೇಳಿದ್ದಾರೆ.
Next Story