ಪ್ರಧಾನಿ ಮೋದಿ ಎಲಾನ್ ಮಸ್ಕ್ ಅವರನ್ನು ಏಕೆ ಭೇಟಿಯಾದರು ಎಂದು ನನಗೆ ಗೊತ್ತಿಲ್ಲ: ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ (PTI)
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಎಲಾನ್ ಮಸ್ಕ್ ಅವರನ್ನು ಏಕೆ ಭೇಟಿಯಾದರು ಎಂದು ನನಗೆ ಗೊತ್ತಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಎಲಾನ್ ಮಸ್ಕ್ ಪ್ರಧಾನಿ ನರೇಂದ್ರ ಮೋದಿಯವರನ್ನು ಅಮೆರಿಕದ ಸಿಇಒ ಅಥವಾ ಅಮೆರಿಕ ಸರ್ಕಾರದ ಪ್ರತಿನಿಧಿಯಾಗಿ ಭೇಟಿಯಾದರೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ನನಗೆ ಗೊತ್ತಿಲ್ಲ" ಎಂದು ಹೇಳಿದರು.
"ಅವರಿಬ್ಬರು ಭೇಟಿಯಾದರು. ಅವರು ಭಾರತದಲ್ಲಿ ವ್ಯಾಪಾರ ಮಾಡಲು ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಎಲಾನ್ ಮಸ್ಕ್ ಕಂಪೆನಿಯನ್ನು ನಡೆಸುತ್ತಿರುವುದರಿಂದ ಭೇಟಿಯಾಗಿರಬಹುದು", ಎಂದು ಟ್ರಂಪ್ ಪ್ರತಿಕ್ರಿಯೆ ನೀಡಿದ್ದಾರೆ.
Next Story