ಪಾಕಿಸ್ತಾನ ಟಿ20 ವಿಶ್ವಕಪ್ ಗೆದ್ದರೆ ಆಟಗಾರರೆಲ್ಲ ಕುಬೇರರಾಗಲಿದ್ದಾರೆ!
Photo:X/TheRealPCB
ಕರಾಚಿ: ಬಾಬರ್ ಅಝಂ ನೇತೃತ್ವದ ಪಾಕಿಸ್ತಾನ ಟಿ20 ಕ್ರಿಕೆಟ್ ತಂಡ ಈ ಬಾರಿಯ ವಿಶ್ವಕಪ್ ಗೆದ್ದರೆ ತಂಡದ ಎಲ್ಲ ಸದಸ್ಯರಿಗೆ ತಲಾ ಒಂದು ಲಕ್ಷ ಡಾಲರ್ (83 ಲಕ್ಷ ರೂಪಾಯಿ) ಬಹುಮಾನ ನೀಡುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾನುವಾರ ಪ್ರಕಟಿಸಿದೆ.
ಟಿ20 ವಿಶ್ವಕಪ್ ಪಂದ್ಯಾವಳಿಗೆ ಮುನ್ನ ಐರ್ಲೆಂಡ್ ಮತ್ತು ಇಂಗ್ಲೆಂಡ್ ಜತೆಗಿನ ಸರಣಿಗಾಗಿ ಪಾಕಿಸ್ತಾನ ತಂಡ ತೆರಳುವ ಮುನ್ನ ಎರಡು ಗಂಟೆಗಳ ಕಾಲ ಆಟಗಾರರ ಜತೆ ಚರ್ಚಿಸಿದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ಘೋಷಣೆ ಮಾಡಿದರು.
"ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಡಿ. ಪಾಕಿಸ್ತಾನಕ್ಕಾಗಿ ಆಟವಾಡಿ. ತಂಡಸ್ಫೂರ್ತಿಯನ್ನು ಪ್ರದರ್ಶಿಸಿ. ದೇವರ ಇಚ್ಛೆಯಂತೆ ತಂಡ ಗೆಲುವು ಸಾಧಿಸಲಿದೆ" ಎಂದು ಅವರು ಆಟಗಾರರನ್ನು ಹುರಿದುಂಬಿಸಿದರು. ಎಲ್ಲ ಆಟಗಾರರು ಒಗ್ಗಟ್ಟಿನಿಂದ ಇದ್ದಾರೆ. ವೇಗದ ಬೌಲರ್ ಶಾಹೀನ್ ಶಾ ಅಫ್ರೀದಿ ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
Next Story