ತನ್ನ ಹಿರಿಯ ಭಾರತೀಯ ಅಧಿಕಾರಿಯ ʼಭಾರತಕ್ಕೆ ಶೇ 8 ಪ್ರಗತಿ ದರ ಅಂದಾಜುʼ ಹೇಳಿಕೆಯಿಂದ ದೂರ ಉಳಿದ ಐಎಂಎಫ್
ವಾಷಿಂಗ್ಟನ್: ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ಇದರ ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ಭಾರತದ ಪ್ರಗತಿ ಪ್ರಮಾಣದ ಅಂಕಿಅಂಶಗಳ ಬಗ್ಗೆ ಇತ್ತೀಚೆಗೆ ವ್ಯಕ್ತಪಡಿಸಿರುವ ಅಭಿಪ್ರಾಯವು ಐಎಂಎಫ್‌ನ ಅಭಿಪ್ರಾಯವಲ್ಲ ಬದಲು ಐಎಂಎಫ್‌ನಲ್ಲಿ ಭಾರತದ ಪ್ರತಿನಿಧಿಯಾಗಿ ಅವರು ವ್ಯಕ್ತಪಡಿಸಿದ ಅಭಿಪ್ರಾಯವಾಗಿದೆ ಎಂದು ಐಎಂಎಫ್ ವಕ್ತಾರೆ ಜೂಲೀ ಕೊಝಕ್ ಹೇಳಿದ್ದಾರೆ.
ಭಾರತಕ್ಕೆ ಶೇ 8 ಪ್ರಗತಿ ಪ್ರಮಾಣವನ್ನು ಅಂದಾಜಿಸಿ ಇತ್ತೀಚೆಗೆ ಸುಬ್ರಮಣಿಯನ್ ನೀಡಿದ ಹೇಳಿಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು. ಐಎಂಎಫ್ ಕೊನೆಯದಾಗಿ ಅಂದಾಜಿಸಿದ ಭಾರತದ ಪ್ರಗತಿ ಪ್ರಮಾಣಕ್ಕಿಂತ ಸುಬ್ರಮಣಿಯನ್ ಹೇಳಿದ್ದು ಭಿನ್ನವಾಗಿತ್ತು.
ಭಾರತದ ಆರ್ಥಿಕತೆ 2047 ತನಕ ಶೇ. 8 ದರದಲ್ಲಿ ಬೆಳೆಯಬಹುದು ಎಂದು ಮಾರ್ಚ್ 28ರಂದು ದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುವ ವೇಳೆ ಸುಬ್ರಮಣಿಯನ್ ಹೇಳಿದ್ದರು.
ಐಎಂಎಫ್‌ಗೆ ಕಾರ್ಯನಿರ್ವಾಹಕ ಮಂಡಳಿಯಿಲ್ಲ. ಆ ನಿರ್ವಾಹಕ ಮಂಡಳಿಯಲ್ಲಿ ವಿವಿಧ ದೇಶಗಳು ಅಥವಾ ದೇಶಗಳ ಗುಂಪುಗಳ ಪ್ರತಿನಿಧಿಗಳು ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ,” ಎಂದು ವಕ್ತಾರೆ ಹೇಳಿದರು.