ಇಮ್ರಾನ್ ʻಜೈಲು ವಿಚಾರಣೆʻ ಕಾನೂನು ಬಾಹಿರ ಪಾಕ್ ಕೋರ್ಟ್ ಘೋಷಣೆ
ಇಮ್ರಾನ್ಖಾನ್ | Photo: PTI
ಇಸ್ಲಮಾಬಾದ್: ಸರಕಾರದ ರಹಸ್ಯವನ್ನು ಸೋರಿಕೆ ಮಾಡಿರುವ ಆರೋಪದಲ್ಲಿ ಮಾಜಿ ಪ್ರಧಾನಿ ಇಮ್ರಾನ್ಖಾನ್ ಅವರ ವಿಚಾರಣೆಯನ್ನು ಜೈಲಿನಲ್ಲಿ ನಡೆಸುವುದು ಕಾನೂನುಬಾಹಿರ ಎಂದು ಪಾಕಿಸ್ತಾನದ ನ್ಯಾಯಾಲಯ ಘೋಷಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಭದ್ರತೆಯ ಕಾರಣವನ್ನು ನೀಡಿ ಇಮ್ರಾನ್ಖಾನ್ ಅವರ ವಿಚಾರಣೆಯನ್ನು ಜೈಲಿನಲ್ಲಿಯೇ ನಡೆಸುವಂತೆ ಕಾನೂನು ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಇಮ್ರಾನ್ ವಕೀಲರು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಅಧಿಸೂಚನೆ ಕಾನೂನುಬಾಹಿರ ಎಂದು ತೀರ್ಪು ನೀಡಿರುವುದಾಗಿ ಇಮ್ರಾನ್ಖಾನ್ ಅವರ ವಕೀಲರು ಹೇಳಿದ್ದಾರೆ.
Next Story