ಪಾಕ್ ಚುನಾವಣೆ: ತನಗೆ ಗೆಲುವು ಎನ್ನುತ್ತಿರುವ ಇಮ್ರಾನ್ ಖಾನ್ ಪಕ್ಷ, ಅಲ್ಲಗಳೆಯುತ್ತಿರುವ ನವಾಝ್ ಶರೀಫ್ ಪಕ್ಷ
ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Photo: PTI)
ಇಸ್ಲಾಮಾಬಾದ್: ಜೈಲುಪಾಲಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷ ತೆಹರೀಕ್-ಇ-ಇನ್ಸಾಫ್ ದೇಶದ ಸಾರ್ವತ್ರಿಕ ಚುನಾವಣೆಯನ್ನು ತಾನು ಜಯ ಗಳಿಸಿದೆ ಎಂದು ಹೇಳಿಕೊಂಡಿದೆಯಲ್ಲದೆ ಚುನಾವಣಾ ಫಲಿತಾಂಶವನ್ನು ತಿರುಚಲು ಫಲಿತಾಂಶ ಘೋಷಣೆಯನ್ನು ವಿಳಂಬಿಸಲಾಗಿದೆ ಎಂದು ಆರೋಪಿಸಿದೆ.
ಪಿಎಂಎಲ್-ಎನ್ ನಾಯಕ ನವಾಝ್ ಶರೀಫ್ ಅವರಿಗೆ ಸೋಲೊಪ್ಪಿಕೊಳ್ಳುವಂತೆಯೂ ಇಮ್ರಾನ್ ಖಾನ್ ಅವರ ಪಕ್ಷ ಆಗ್ರಹಿಸಿದೆ. ನವಾಝ್ ಶರೀಫ್ ಅವರಿಗೆ ಪಾಕ್ ಸೇನೆಯ ಬೆಂಬಲವಿರುವುದರಿಂದ ಅವರು ಗೆಲ್ಲಬಹುದೆಂದೇ ಅಂದಾಜಿಸಲಾಗಿತ್ತು. ಆದರೆ ಪಿಎಂಎಲ್ಎನ್ ಪಕ್ಷವು ಇಮ್ರಾನ್ ಖಾನ್ ಅವರ ಪಕ್ಷದ ಹೇಳಿಕೆಯನ್ನು ತಿರಸ್ಕರಿಸಿದೆ ಹಾಗೂ ತಾನು ಚುನಾವಣೆ ಗೆಲ್ಲುವುದಾಗಿ ಹೇಳಿಕೊಂಡಿದೆ.
ಗುರುವಾರ ನಡೆದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಮುಂದುವರಿದಿದೆ. ಆದರೆ ವ್ಯಾಪಕ ಅವ್ಯವಹಾರ, ಹಿಂಸಾಚಾರ ಹಾಗೂ ದೇಶಾದ್ಯಂತ ಮೊಬೈಲ್ ಜಾಲ ಈ ಚುನಾವಣೆ ವೇಳೆ ಬಂದ್ ಆಗಿತ್ತು.
ಹಲವಾರು ಪಕ್ಷಗಳು ಕಣದಲ್ಲಿದ್ದರೂ ಪ್ರಮುಖ ಹೋರಾಟ ಇಮ್ರಾನ್ ಖಾನ್ ಹಾಗೂ ನವಾಜ್ ಶರೀಫ್ ಅವರ ಪಕ್ಷಗಳ ನಡುವೆ ಆಗಿತ್ತು. ಬಿಲಾವಲ್ ಝರ್ದಾರಿ ಭುಟ್ಟೋ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಕೂಡ ಸ್ಪರ್ಧಿಸುತ್ತಿದೆ.
ಇಮ್ರಾನ್ ಅವರ ಪಿಟಿಐ ತಾನು 265 ಕ್ಷೇತ್ರಗಳ ಪೈಕಿ 150 ಕ್ಷೇತ್ರಗಳನ್ನು ಗೆದ್ದಿರುವುದಾಗಿ ಹೇಳಿಕೊಂಡಿದೆ.