ಲೆಬನಾನ್ ತೊರೆಯಲು ಭಾರತೀಯರಿಗೆ ಸೂಚನೆ
PC : X
ಬೈರೂತ್ : ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಲೆಬನಾನ್ನಲ್ಲಿರುವ ಭಾರತೀಯರು ತಕ್ಷಣ ಲೆಬನಾನ್ ತೊರೆಯುವಂತೆ ಬೈರೂತ್ನಲ್ಲಿನ ಭಾರತೀಯ ದೂತಾವಾಸ ಆಗ್ರಹಿಸಿದೆ.
ಅಲ್ಲದೆ ಲೆಬನಾನ್ಗೆ ಪ್ರಯಾಣಿಸದಂತೆ ಭಾರತೀಯ ಪ್ರಜೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಲೆಬನಾನ್ನಲ್ಲಿಯೇ ಅನಿವಾರ್ಯವಾಗಿ ಉಳಿದುಕೊಳ್ಳುವ ಸಂದರ್ಭ ಬಂದರೆ ಗರಿಷ್ಟ ಎಚ್ಚರ ವಹಿಸುವಂತೆ ಮತ್ತು ಬೈರೂತ್ನಲ್ಲಿರುವ ಭಾರತೀಯ ದೂತಾವಾಸದ ಜತೆ ನಿರಂತರ ಸಂಪರ್ಕದಲ್ಲಿ ಇರುವಂತೆ ಭಾರತೀಯರಿಗೆ ಸಲಹೆ ನೀಡಲಾಗಿದೆ.
Next Story