ಸ್ವಂತ ನಿಲುವು ನಿರ್ಧರಿಸಲು ಭಾರತ ಸ್ವತಂತ್ರ : ಶ್ವೇತಭವನ
Photo: NDTV
ವಾಷಿಂಗ್ಟನ್: ಅಮೆರಿಕದ ಕಾರ್ಯತಂತ್ರದ ಪಾಲುದಾರನಾಗಿ ಉಳಿದಿರುವ ಭಾರತ, ಮಧ್ಯಪ್ರಾಚ್ಯ ಸೇರಿದಂತೆ ಪ್ರಪಂಚದಾದ್ಯಂತದ ಯಾವುದೇ ಬಿಕ್ಕಟ್ಟು ಅಥವಾ ಅನಿಶ್ಚಿತತೆಯ ಬಗ್ಗೆ ಸ್ವಂತ ನಿಲುವು ನಿರ್ಧರಿಸಲು ಸ್ವತಂತ್ರವಾಗಿದೆ ಎಂದು ಶ್ವೇತಭವನ ಹೇಳಿದೆ.
ಭಾರತವು ಇಸ್ರೇಲ್ ಹಾಗೂ ಫೆಲೆಸ್ತೀನ್ ಎರಡರ ಜತೆಯೂ ಉತ್ತಮ ಸಂಬಂಧ ಹೊಂದಿರುವುದರಿಂದ ಮಧ್ಯಪ್ರಾಚ್ಯ ಬಿಕ್ಕಟ್ಟಿಗೆ ಪರಿಹಾರ ರೂಪಿಸುವಲ್ಲಿ ಭಾರತಕ್ಕೂ ಪಾತ್ರವಿರುವುದಾಗಿ ಅಮೆರಿಕ ಭಾವಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಷ್ಟ್ರೀಯ ಭದ್ರತಾ ಸಮಿತಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ `ಭಾರತವು ಅಮೆರಿಕದ ಪ್ರಮುಖ ಕಾರ್ಯತಂತ್ರದ ಪಾಲುದಾರನಾಗಿದೆ. ಆದರೆ ಮಧ್ಯಪ್ರಾಚ್ಯ ಸೇರಿದಂತೆ ಜಗತ್ತಿನಾದ್ಯಂತದ ಯಾವುದೇ ನಿರ್ದಿಷ್ಟ ಬಿಕ್ಕಟ್ಟು ಅಥವಾ ಅನಿಶ್ಚಿತತೆಯ ಕುರಿತ ಅವರ ನಿಲುವು ಏನಾಗಲಿದೆ ಎಂಬುದನ್ನು ಅವರೇ ನಿರ್ಧರಿಸುತ್ತಾರೆ' ಎಂದರು.
Next Story