ಫೆಲೆಸ್ತೀನ್ ಗೆ ಬೆಂಬಲ ಪುನರುಚ್ಚರಿಸಿದ ಭಾರತ
Photo: Canva
India reaffirms support to Palestine
ವಿಶ್ವಸಂಸ್ಥೆ : ಫೆಲೆಸ್ತೀನ್ ಜನರೊಂದಿಗಿನ ದೇಶದ ದೀರ್ಘಕಾಲದ ಸಂಬಂಧವನ್ನು ಪುನರುಚ್ಚರಿಸಿದ ಭಾರತ, ಈಗ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ನಾಗರಿಕರ ಜೀವಹಾನಿ ಆಗುತ್ತಿರುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.
ಮಂಗಳವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ` ಭಾರತ ಮತ್ತು ಫೆಲೆಸ್ತೀನ್ ನಡುವೆ ಆಳವಾದ ಐತಿಹಾಸಿಕ ಸಂಬಂಧವಿದೆ. ಶಾಂತಿ ಮತ್ತು ಸಮೃದ್ಧಿಗಾಗಿ ಫೆಲೆಸ್ತೀನೀಯರು ನಡೆಸುತ್ತಿರುವ ಪ್ರಯತ್ನಕ್ಕೆ ನಮ್ಮ ನಿರಂತರ ಬೆಂಬಲವಿದೆ. ಗಾಝಾದಲ್ಲಿ ಮಾನವೀಯ ಯುದ್ಧವಿರಾಮ ಶಾಶ್ವತವಾಗಿ ಜಾರಿಯಾದರೆ ಅಲ್ಲಿನ ನಾಗರಿಕರಿಗೆ ತುರ್ತು ಅಗತ್ಯದ ವಸ್ತುಗಳನ್ನು ಒದಗಿಸಲು ಸಾಧ್ಯವಾಗುತ್ತದೆ' ಎಂದರು.
Next Story