ವರ್ಜಿನಿಯಾ | ಡೆಮಾಕ್ರಾಟಿಕ್ ಪ್ರೈಮರಿ ಚುನಾವಣೆಯಲ್ಲಿ ಭಾರತೀಯ ಮೂಲದ ಸುಹಾಸ್ ಸುಬ್ರಹ್ಮಣ್ಯಂ ಗೆಲುವು
ಸುಹಾಸ್ ಸುಬ್ರಮಣ್ಯಂ (Photo: X/@SuhasforVA)
ವಾಶಿಂಗ್ಟನ್ : ವರ್ಜಿನಿಯಾದಿಂದ ಅಮೆರಿಕ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಗಾಗಿ ಮಂಗಳವಾರ ನಡೆದ ಡೆಮಾಕ್ರಾಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಭಾರತೀಯ ಮೂಲದ ಸುಹಾಸ್ ಸುಬ್ರಮಣ್ಯಂ ಅವರು ವಿಜಯಿಯಾಗಿದ್ದಾರೆ. ಅವರು ಭಾರತೀಯ ಮೂಲದ ಮಹಿಳೆ ಕ್ರಿಸ್ಟ್ಲೆ ಕೌಲ್ ಸೇರಿದಂತೆ ಇತರ 11 ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ. ಇದರೊಂದಿಗೆ ನವೆಂಬರ್ನಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
37 ವರ್ಷದ ಸುಹಾಸ್ ಅವರು ವರ್ಜಿನಿಯಾದಿಂದ ಅಮೆರಿಕ ಕಾಂಗ್ರೆಸ್ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮೈಕ್ಕ್ಲಾನ್ಸಿ ಅವರನ್ನು ಎದುರಿಸಲಿದ್ದಾರೆ.
ಸುಹಾಸ್ ಅವರ ಹೆತ್ತವರು ಬೆಂಗಳೂರು ಮೂಲದವರಾಗಿದ್ದು, ಅಮೆರಿಕಕ್ಕೆ ವಲಸೆ ಬಂದಿದ್ದರು. ವೃತ್ತಿಯಲ್ಲಿ ವಕೀಲರಾಗಿರುವ ಸುಹಾಸ್ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಅಮೆರಿಕಕ್ಕೆ ಉತ್ತಮ ಭವಿಷ್ಯವನ್ನು ಖಾತರಿಪಡಿಸಲುತಾನು
2019ರಲ್ಲಿ ವರ್ಜಿನಿಯಾ ಜನರಲ್ ಅಸೆಂಬ್ಲಿ ಹಾಗೂ 2023ರಲ್ಲಿ ವರ್ಜಿನಿಯಾ ರಾಜ್ಯ ಸೆನೆಟ್ ಇವೆರಡಕ್ಕೂ ಆಯ್ಕೆಯಾದ ಮೊದಲ ಭಾರತೀಯ-ಅಮೆರಿಕನ್, ದಕ್ಷಿಣ ಏಶ್ಯನ್ ಹಾಗೂ ಹಿಂದೂ ಸಮುದಾಯದ ವ್ಯಕ್ತಿಯೆಂಬ ದಾಖಲೆಗೆ ಸುಹಾಸ್ ಪಾತ್ರರಾಗಿದ್ದಾರೆ.ವರ್ಜಿನಿಯಾದಲ್ಲಿ ಭಾರತೀಯ-ಅಮೆರಿಕನ್ ಪ್ರಜೆಗಳು ಅಧಿಕ ಸಂಖ್ಯೆಯಲ್ಲಿರುವುದು ಅವರ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಈ ಕ್ಷೇತ್ರವು ವಾಶಿಂಗ್ಟನ್ನ ಕೆಲವು ಉಪನಗರಗಳನ್ನು ಒಳಗೊಂಡಿದೆ. ಈ ಅಭೂತಪೂರ್ವ ಗೆಲುವನ್ನು ಸಾಧಿಸಿದ್ದಕ್ಕಾಗಿ ಅವರು ಮತದಾರರು, ಡೆಮಾಕ್ರಾಟಿಕ್ ಪಕ್ಷದ ಕಾರ್ಯಕರ್ತರು,ಬೆಂಬಲಿಗರು ಹಾಗೂ ಕುಟುಂಬ ಸದಸ್ಯರಿಗೆ ಧನ್ಯವಾದ ಅರ್ಪಿಸಿದ್ದಾರೆ.