ಹಸ್ತಾಂತರ ಪ್ರಶ್ನಿಸಿದ್ದ ನಿಖಿಲ್ ಗುಪ್ತಾ ಅರ್ಜಿ ತಿರಸ್ಕರಿಸಿದ ಜೆಕ್ ನ್ಯಾಯಾಲಯ
ಸಾಂದರ್ಭಿಕ ಚಿತ್ರ
ಪ್ರೇಗ್ : ತನ್ನನ್ನು ಅಮೆರಿಕಕ್ಕೆ ಹಸ್ತಾಂತರಿಸುವುದನ್ನು ತಡೆಯಬೇಕೆಂದು ಕೋರಿ ಭಾರತದ ಪ್ರಜೆ ನಿಖಿಲ್ ಗುಪ್ತ ಸಲ್ಲಿಸಿದ್ದ ಅರ್ಜಿಯನ್ನು ಜೆಕೋಸ್ಲಾವಾಕಿಯಾದ ನ್ಯಾಯಾಲಯ ತಿರಸ್ಕರಿಸಿದೆ.
ಅಮೆರಿಕದ ನೆಲದಲ್ಲಿ ಸಿಖ್ ಪ್ರತ್ಯೇಕತಾವಾದಿ ಮುಖಂಡ ಗುರುಪತ್ವಂತ್ ಸಿಂಗ್ ಪನ್ನೂನ್ನ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಗುಪ್ತಾ ಆರೋಪಿಯೆಂದು ಅಮೆರಿಕದ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಅಮೆರಿಕದಿಂದ ಪರಾರಿಯಾಗಿದ್ದ ಗುಪ್ತಾನನ್ನು ಜೆಕ್ ಅಧಿಕಾರಿಗಳು ಬಂಧಿಸಿದ್ದರು. ಸುಮಾರು 1 ವರ್ಷದಿಂದ ಬಂಧನದಲ್ಲಿರುವ ಗುಪ್ತಾನನ್ನು ಅಮೆರಿಕಕ್ಕೆ ಹಸ್ತಾಂತರಿಸಬೇಕೇ ಎಂಬ ಬಗ್ಗೆ ನ್ಯಾಯ ಸಚಿವರು ನಿರ್ಧರಿಸುತ್ತಾರೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.
Next Story