ಕೆನಡಾದಲ್ಲಿ ಭಾರತೀಯನ ಇರಿದು ಕೊಲೆ : ಶಂಕಿತ ವಶಕ್ಕೆ

Photo | indiatoday
ಒಟ್ಟಾವಾ : ಕೆನಡಾದ ರಾಕ್ಲ್ಯಾಂಡ್ ಪ್ರದೇಶದಲ್ಲಿ ಭಾರತೀಯನೋರ್ವನನ್ನು ಇರಿದು ಕೊಲೆ ಮಾಡಲಾಗಿದೆ ಎಂದು ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಶನಿವಾರ ತಿಳಿಸಿದೆ.
ಒಟ್ಟಾವಾ ಬಳಿಯ ರಾಕ್ಲ್ಯಾಂಡ್ನಲ್ಲಿ ಭಾರತೀಯ ಪ್ರಜೆಯೋರ್ವ ಚೂರಿ ಇರಿತದಿಂದ ಮೃತಪಟ್ಟಿದ್ದಾನೆ. ಘಟನೆಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ. ಸಂತ್ರಸ್ತನ ಕುಟುಂಬಕ್ಕೆ ಬೇಕಾಗಿರುವ ಎಲ್ಲಾ ನೆರವು ನೀಡುವುದಾಗಿ ರಾಯಭಾರಿ ಕಚೇರಿ ಎಕ್ಸ್ಲ್ಲಿನ ಪೋಸ್ಟ್ನಲ್ಲಿ ತಿಳಿಸಿದೆ.
CBC ವರದಿಯ ಪ್ರಕಾರ, ರಾಕ್ಲ್ಯಾಂಡ್ನಲ್ಲಿ ಓರ್ವ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವನನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ.
Next Story