ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ನಾಪತ್ತೆ

ಸುದೀಕ್ಷಾ ಕೋಣಂಕಿ |PC : NDTV
ವಾಷಿಂಗ್ಟನ್: ಅಮೆರಿಕದ ಪಿಟ್ಸ್ಬರ್ಗ್ ವಿವಿಯ ವಿದ್ಯಾರ್ಥಿನಿ, ಭಾರತೀಯ ಮೂಲದ ಸುದೀಕ್ಷಾ ಕೋಣಂಕಿ ಡೊಮಿನಿಕನ್ ರಿಪಬ್ಲಿಕ್ನ ಪುಂಟಾ ಕಾನ ಬೀಚ್ನಿಂದ ನಾಪತ್ತೆಯಾಗಿದ್ದು ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿರುವುದಾಗಿ ವರದಿಯಾಗಿದೆ.
ಭಾರತೀಯ ಮೂಲದ ಸುದೀಕ್ಷಾ ಅಮೆರಿಕದ ಶಾಶ್ವತ ನಿವಾಸಿಯಾಗಿದ್ದು ತನ್ನ ಸ್ನೇಹಿತರ ಜತೆ ರಜೆ ಕಳೆಯಲೆಂದು ಬಂದವರು ರಿಯು ರಿಪಬ್ಲಿಕನ್ ಹೋಟೆಲ್ನ ಬೀಚ್ ಬಳಿ ಗುರುವಾರ ಬೆಳಿಗ್ಗೆ ಕೊನೆಯದಾಗಿ ಕಾಣಿಸಿಕೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story