ಭಾರತದ ಪಿಎಚ್ ಡಿ ವಿದ್ಯಾರ್ಥಿನಿ ಲಂಡನ್ ನಲ್ಲಿ ಅಪಘಾತದಲ್ಲಿ ಮೃತ್ಯು
ಚೀಸ್ಟಾ ಕೊಚ್ಚಾರ್
ಲಂಡನ್: ಗುರುಗಾಂವ್ ನ 33 ವರ್ಷದ ಪಿಎಚ್ ಡಿ ವಿದ್ಯಾರ್ಥಿನಿ ಸೈಕಲ್ ನಲ್ಲಿ ಮನೆಗೆ ಮರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಇವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಪಿಎಚ್ ಡಿ ಪದವಿ ವ್ಯಾಸಂಗ ಮಾಡುತ್ತಿದ್ದರು.
ಚೀಸ್ಟಾ ಕೊಚ್ಚಾರ್ ಘಟನೆಯಲ್ಲಿ ಸ್ಥಳದಲ್ಲೇ ಮೃತಪಟ್ಟರು. ಆಕೆಯ ಪತಿ ಪ್ರಶಾಂತ್ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಈ ಅಪಘಾತ ಸಂಭವಿಸಿದಾಗ ಅವರು ಬೈಕ್ನಲ್ಲಿ ಸ್ವಲ್ಪ ದೂರದಲ್ಲಿದ್ದರು. ದೊಡ್ಡ ಸದ್ದು ಕೇಳಿ ಚೀಸ್ಟಾ ಅವರ ನೆರವಿಗೆ ಧಾವಿಸಿದರು. ಪೊಲೀಸರು ಹಾಊ ಅರೆವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಆಕೆ ತೀವ್ರವಾಗಿ ಗಾಯಗೊಂಡಿರುವುದನ್ನು ಗಮನಿಸಿದರು. ಸ್ವಲ್ಪ ಹೊತ್ತಲ್ಲೇ ಆಕೆ ಮೃತಪಟ್ಟರು.
ಲಾರಿ ಈಗಾಗಲೇ ತಿರಸ್ಕøತ ವಾಹನ ಎಂದು ತಿಳಿದುಬಂದಿದ್ದು, ಸ್ಥಳದಲ್ಲಿ ಕಂಡುಬಂದಿದೆ. ಚಾಲಕ ತನಿಖೆಯಲ್ಲಿ ಪೊಲೀಸರ ಜತೆ ಸಹಕರಿಸುತ್ತಿದ್ದಾನೆ ಎನ್ನಲಾಗಿದೆ. ತನಿಖೆ ನಡೆಯುತ್ತಿದ್ದು, ಇದುವರೆಗೆ ಘಟನೆ ಸಂಬಂಧ ಯಾರನ್ನೂ ಬಂಧಿಸಿಲ್ಲ.
ಚೀಸ್ಟಾ ಹಾಗೂ ಪ್ರಶಾಂತ್ ಒಂದು ವರ್ಷದ ಹಿಂದಷ್ಟೇ ವಿವಾಹವಾಗಿದ್ದರು. ಆಕೆಯ ತಂದೆ ಲೆಫ್ಟಿನೆಂಟ್ ಕರ್ನಲ್ ಡಾ.ಎಸ್.ಪಿ.ಕೊಚ್ಚಾರ್, ಭಾರತೀಯ ಸೇನೆಯಲ್ಲಿ 23ನೇ ಘಟಕದ ಹೊಣೆ ಹೊತ್ತಿರುವ ಸಿಗ್ನಲ್ ಆಫೀಸರ್ ಆಗಿದ್ದಾರೆ. ಆಕೆಯ ಅಣ್ಣ ರಾಘವ್ ಇಂಗ್ಲೆಂಡ್ಗೆ ಧಾವಿಸಿದ್ದಾರೆ ಎಂದು ಮೂಲಗಳು ಹೇಳಿವೆ.