ಕೆನಡಾದಲ್ಲಿ ಪಂಜಾಬ್ ಮೂಲದ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ
ಸಾಂದರ್ಭಿಕ ಚಿತ್ರ |PC : freepik.com
ಒಟ್ಟಾವಾ: ಕೆನಡಾದ ಎಡ್ಮಂಟನ್ ನ ಅಪಾರ್ಟ್ಮೆಂಟ್ ವೊಂದರಲ್ಲಿ ಪಂಜಾಬ್ ಮೂಲದ ವಿದ್ಯಾರ್ಥಿಯೋರ್ವನನ್ನು ಹತ್ಯೆ ಮಾಡಲಾಗಿದೆ.
ಹತ್ಯೆಯಾದ ವಿದ್ಯಾರ್ಥಿಯನ್ನು ಹರ್ಷಂದೀಪ್ ಸಿಂಗ್(20) ಎಂದು ಗುರುತಿಸಲಾಗಿದೆ. ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಸಿಂಗ್ ಅವರನ್ನು ಶುಕ್ರವಾರ ತಡರಾತ್ರಿ ವಸತಿಸಮಚ್ಚಯವೊಂದರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಮೂವರು ಹರ್ಷಂದೀಪ್ ಸಿಂಗ್ ಗೆ ಹಲ್ಲೆ ನಡೆಸುವುದು, ಮೆಟ್ಟಿಲುಗಳ ಕೆಳಗೆ ಎಸೆಯುವುದು, ಹಿಂದಿನಿಂದ ಆರೋಪಿಯನ್ನು ಶೂಟ್ ಮಾಡುವುದು ಕಂಡು ಬಂದಿದೆ. ಸಿಂಗ್ ಗೆ ಗುಂಡು ಹಾರಿಸಿದ ತಕ್ಷಣ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ
ಕೆನಡಾದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಇವಾನ್ ರೈನ್(30) ಮತ್ತು ಜುಡಿತ್ ಸಾಲ್ಟ್ಯಾಕ್ಸ್(30) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
Next Story