ಇಂಡೊನೇಶ್ಯಾ: ಬಂಡುಕೋರರ ದಾಳಿಯಲ್ಲಿ 17 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ
ಜಕಾರ್ತ: ಎಪ್ರಿಲ್ 6ರಿಂದ ಇಂಡೊನೇಶ್ಯಾದ ಪಪುವಾ ಪ್ರಾಂತದಲ್ಲಿ ನಡೆಸಿದ ದಾಳಿಯಲ್ಲಿ 17 ಮಂದಿಯನ್ನು ಹತ್ಯೆ ಮಾಡಿರುವುದಾಗಿ ಬಂಡುಕೋರರ ಗುಂಪಿನ ವಕ್ತಾರರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಗಣಿ ಕಾರ್ಮಿಕರಂತೆ ವೇಷ ಮರೆಸಿಕೊಂಡಿದ್ದ ಯೋಧರ ಮೇಲೆ ದಾಳಿ ನಡೆಸಿರುವುದಾಗಿ ಪಪುವಾ ಪ್ರಾಂತದಲ್ಲಿ ಸಕ್ರಿಯವಾಗಿರುವ ಬಂಡುಕೋರರ ಗುಂಪಿನ ವಕ್ತಾರ ಸೆಬ್ಬಿ ಸ್ಯಾಂಬಮ್ ಹೇಳಿದ್ದಾರೆ. ಬಂಡುಕೋರರು ಇಬ್ಬರನ್ನು ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಪಪುವಾ ಪ್ರಾಂತದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ 17 ಕಾರ್ಮಿಕರನ್ನು ಬಂಡುಕೋರರು ಹತ್ಯೆ ಮಾಡಿದ್ದಾರೆ. ಇಬ್ಬರನ್ನು ಬಂಡುಕೋರರು ಅಪಹರಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಹೇಳಿವೆ.
Next Story