ಟರ್ಕಿಯಲ್ಲಿ ಇನ್ಸ್ಟಾಗ್ರಾಂಗೆ ನಿರ್ಬಂಧ | ನಿಗೂಢ ನಡೆಗೆ ಬಳಕೆದಾರರ ಆಕ್ರೋಶ
ಅಂಕಾರ : ಮೆಟಾ ಒಡೆತನದ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನ ಬಳಕೆಗೆ ಟರ್ಕಿಯಲ್ಲಿ ನಿರ್ಬಂಧ ಹೇರಲಾಗಿದೆ ಎಂದು ಟರ್ಕಿಯ ಮಾಹಿತಿ ತಂತ್ರಜ್ಞಾನ ನಿಯಂತ್ರಕ ಪ್ರಾಧಿಕಾರ ಆದೇಶಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಟರ್ಕಿಯ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಪ್ರಾಧಿಕಾರ ಆಗಸ್ಟ್ 2 ರಂದು ತನ್ನ ವೆಬ್ಸೈಟ್ನಲ್ಲಿ ಇನ್ಸ್ಟಾಗ್ರಾಂ ನಿರ್ಬಂಧಿಸುವ ಬಗ್ಗೆ ಪ್ರಕಟಿಸಿದೆ.
ಟರ್ಕಿ ಅಧ್ಯಕ್ಷರ ಸಂವಹನ ನಿರ್ದೇಶಕ ಅಲ್ಟುನ್, ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ‘ಇದು ಸೆನ್ಸಾರ್, ಸ್ಪಷ್ಟ ಮತ್ತು ಸರಳವಾಗಿದೆ’ ಎಂದು ತಿಳಿಸಿದ್ದಾರೆ.
ಎಷ್ಟು ದಿನಗಳವರೆಗೆ ಈ ನಿರ್ಬಂಧ ಇರಲಿದೆ ಹಾಗೂ ಯಾವ ಕಾರಣಕ್ಕೆ ನಿರ್ಬಂಧ ಹೇರಲಾಗಿದೆ ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ.
ಟರ್ಕಿಯ ಈ ನಿರ್ಧಾರದ ಕುರಿತು ಮೆಟಾ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಟರ್ಕಿಯ ಈ ನಡೆಯಿಂದ ಕಂಪ್ಯೂಟರ್ ಮತ್ತು ಮೊಬೈಲ್ ಫೋನ್ಗಳಲ್ಲಿ ಇನ್ಸ್ಟಾಗ್ರಾಂ ಬಳಸಲು ಸಾಧ್ಯವಾಗುತ್ತಿಲ್ಲ ಎಂದು ಬಳಕೆದಾರರು ಎಕ್ಸ್ನಲ್ಲಿ ದೂರಿದ್ದಾರೆ.
ಹಮಾಸ್ನ ಪ್ರಮುಖ ಅಧಿಕಾರಿ ಇಸ್ಮಾಯಿಲ್ ಹನಿಯೆಹ್ ಅವರ ಹತ್ಯೆಯ ಕುರಿತಾದ ಪೋಸ್ಟ್ಗಳನ್ನು ನಿರ್ಬಂಧಿಸುವ ಉದ್ದೇಶದಿಂದ ಇನ್ಸ್ಟಾಗ್ರಾಂ ಬಳಕಗೆ ನಿರ್ಬಂಧ ಹೇರಿದ್ದಾರೆ ಎಂದು ಬಳಕೆದಾರರು ಆರೋಪಿಸಿದ್ದಾರೆ.