ಲೆಬನಾನ್ ಘರ್ಷಣೆ ಅಂತ್ಯಕ್ಕೆ ಅಂತರಾಷ್ಟ್ರೀಯ ಪ್ರಯತ್ನ : ಯುರೋಪಿಯನ್ ಯೂನಿಯನ್ ಆಗ್ರಹ
PC : PTI
ಬ್ರಸೆಲ್ಸ್ : ಲೆಬನಾನ್ನಲ್ಲಿ ಘರ್ಷಣೆ ತಪ್ಪಿಸಲು ಸಮಯದ ವಿರುದ್ಧ ಓಟದ ಅಗತ್ಯವಿದೆ. ಹೋರಾಟ ಅಂತ್ಯಗೊಳಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸಮುದಾಯದ ಪ್ರಯತ್ನಗಳು ವೇಗಗೊಳ್ಳಬೇಕು ಎಂದು ಯುರೋಪಿಯನ್ ಯೂನಿಯನ್(ಇಯು) ವಿದೇಶಾಂಗ ನೀತಿ ಮುಖ್ಯಸ್ಥ ಜೋಸೆಫ್ ಬೊರೆಲ್ ಶುಕ್ರವಾರ ಆಗ್ರಹಿಸಿದ್ದಾರೆ.
ಲೆಬನಾನ್ಗೆ ಮಾನವೀಯ ನೆರವು ಸಂಗ್ರಹಿಸಲು ಫ್ರಾನ್ಸ್ ನಲ್ಲಿ ನಡೆದ ಸಮಾವೇಶದ ಬಳಿಕ ಮಾತನಾಡಿದ ಬೊರೆಲ್ ` ಈ ನಿಟ್ಟಿನಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಕದನ ವಿರಾಮ ಮೊದಲ ಹೆಜ್ಜೆಯಾಗಿದೆ. ಹಗೆತನ ಕೊನೆಯಾಗದೆ ಯಾವುದೂ ಸಾಧ್ಯವಿಲ್ಲ' ಎಂದರು.
ಲೆಬನಾನ್ನಲ್ಲಿ ಒಮ್ಮೆ ಹೋರಾಟ ನಿಂತ ಬಳಿಕ ದೀರ್ಘಾವಧಿಯಿಂದ ಮುಂದೂಡಲ್ಪಟ್ಟ ಅಧ್ಯಕ್ಷೀಯ ಚುನಾವಣೆಗಳನ್ನು ಸಾಧ್ಯವಾದಷ್ಟು ಬೇಗ ಆಯೋಜಿಸುವ ಅಗತ್ಯವಿದೆ. ಲೆಬನಾನ್ನಲ್ಲಿರುವ ವಿಶ್ವಸಂಸ್ಥೆ ಶಾಂತಿಪಾಲನಾ ನಿಯೋಗವನ್ನೂ ಬಲಪಡಿಸುವ ಅಗತ್ಯವಿದೆ ಎಂದು ಬೊರೆಲ್ ಹೇಳಿದ್ದಾರೆ.
Next Story