ಇರಾನ್: ಬೆಂಕಿ ದುರಂತದಲ್ಲಿ 32 ಮಂದಿ ಮೃತ್ಯು
ಸಾಂದರ್ಭಿಕ ಚಿತ್ರ
ಟೆಹ್ರಾನ್, ನ.3: ಉತ್ತರ ಇರಾನ್ನಲ್ಲಿ ಮಾದಕವಸ್ತು ವ್ಯಸನಿಗಳ ಪುನರ್ವಸತಿ ಕೇಂದ್ರದಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿದುರಂತದಲ್ಲಿ 32 ಮಂದಿ ಮೃತಪಟ್ಟಿದ್ದು 16 ಮಂದಿ ಗಾಯಗೊಂಡಿರುವುದಾಗಿ ಸರಕಾರಿ ಸ್ವಾಮ್ಯದ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ನ ಕ್ಯಾಸ್ಪಿಯನ್ ಸಮುದ್ರ ಪ್ರಾಂತ್ಯದ ಗಿಲಾನ್ನಲ್ಲಿರುವ ಕೇಂದ್ರದಲ್ಲಿ ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಕೇಂದ್ರದಲ್ಲಿ 40 ಮಾದಕವಸ್ತು ವ್ಯಸನಿಗಳಿದ್ದರು. ಎಷ್ಟು ಮಂದಿ ಸಿಬಂದಿಗಳಿದ್ದರು ಎಂಬುದು ದೃಢಪಟ್ಟಿಲ್ಲ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಿಸಿದೆ. 32 ಮಂದಿಯ ಮೃತದೇಹ ಪತ್ತೆಯಾಗಿದ್ದು 16 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಲಾಂಗ್ರೌಡ್ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
Next Story