ಸ್ಫೋಟಕ್ಕೆ ಇಸ್ರೇಲ್ ಹೊಣೆ: ಇರಾನ್ ಆರೋಪ, ಕಠಿಣ ಪ್ರತಿಕ್ರಮದ ಎಚ್ಚರಿಕೆ
Photo : twitter
ಟೆಹ್ರಾನ್: ಹತ್ಯೆಯಾದ ಸೇನಾ ಜನರಲ್ ಸಮಾಧಿಯ ಬಳಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟದ ಹಿಂದೆ ಇಸ್ರೇಲ್ನ ಕೈವಾಡವಿದೆ ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಆರೋಪಿಸಿದ್ದು ಕಠಿಣ ಪ್ರತಿಕ್ರಮದ ಎಚ್ಚರಿಕೆ ನೀಡಿದ್ದಾರೆ.
ಈ ಅಪರಾಧಕ್ಕೆ ಮತ್ತು ನೀವು ಮಾಡಿರುವ ಇತರ ಅಪರಾಧಗಳಿಗೆ ನೀವು ಭಾರೀ ಬೆಲೆ ತೆರಬೇಕಾಗುತ್ತದೆ. ಈ ಶಿಕ್ಷೆಯು ನೀವು ವಿಷಾದಪಡುವ ರೀತಿಯಲ್ಲಿ ಕಠೋರವಾಗಿರಲಿದೆ ಎಂದು ಇಸ್ರೇಲ್ ಆಡಳಿತಕ್ಕೆ ಎಚ್ಚರಿಕೆ ನೀಡುತ್ತಿದ್ದೇನೆ' ಎಂದು ರೈಸಿ ಹೇಳಿರುವುದಾಗಿ ಸಿಎನ್ಎನ್ ವರದಿ ಮಾಡಿದೆ. ಈ ಮಧ್ಯೆ, ಸ್ಫೋಟದ ಹಿಂದೆ ಅಮೆರಿಕ ಮತ್ತು ಇಸ್ರೇಲ್ ಇದೆ ಎಂದು ಇರಾನ್ ಅಧ್ಯಕ್ಷರ ರಾಜಕೀಯ ಸಹಾಯಕ ಮುಹಮ್ಮದ್ ಜಮ್ಶಿಡಿ ಆರೋಪಿಸಿದ್ದಾರೆ. ಈ ಅಪರಾಧದ ಹೊಣೆಯನ್ನು ಇಸ್ರೇಲ್ ಮತ್ತು ಅಮೆರಿಕ ಹೊರಬೇಕಾಗಿದೆ ಎಂದವರು ಹೇಳಿದ್ದಾರೆ.
ಆದರೆ ಇರಾನ್ ನಲ್ಲಿ ನಡೆದ ಅವಳಿ ಬಾಂಬ್ ಸ್ಪೋಟದಲ್ಲಿ ಅನವಶ್ಯಕವಾಗಿ ತನ್ನ ಹೆಸರನ್ನು ಎಳೆದು ತರಲಾಗುತ್ತಿದೆ. ಜತೆಗೆ ಇಸ್ರೇಲ್ ನ ಪಾತ್ರವಿದೆ ಎಂಬ ಹೇಳಿಕೆಯೂ ನಿರಾಧಾರ ಎಂದು ಅಮೆರಿಕದ ಶ್ವೇತಭವನ ಪ್ರತಿಕ್ರಿಯಿಸಿದೆ.