ಇರಾನ್, ರಶ್ಯ, ಚೀನಾ ಜಂಟಿ ಮಿಲಿಟರಿ ಸಮರಾಭ್ಯಾಸ

Photo Credit | ANI
ಟೆಹ್ರಾನ್: ಇರಾನ್, ರಶ್ಯ ಮತ್ತು ಚೀನಾದ ನೌಕಾಪಡೆಗಳು ಸಹಕಾರವನ್ನು ಹೆಚ್ಚಿಸುವ ಉದ್ದೇಶದಿಂದ ಈ ವಾರ ಇರಾನ್ ಕರಾವಳಿಯಲ್ಲಿ ಜಂಟಿ ಸಮರಾಭ್ಯಾಸವನ್ನು ನಡೆಸಲಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಇತ್ತೀಚಿನ ವರ್ಷಗಳಲ್ಲಿ ಈ ವಲಯದಲ್ಲಿ ಇದೇ ರೀತಿಯ ಸಮರಾಭ್ಯಾಸಗಳನ್ನು ಮೂರು ದೇಶಗಳು ನಡೆಸಿವೆ. `ಆಗ್ನೇಯ ಇರಾನ್ನಲ್ಲಿ ಒಮನ್ ಕೊಲ್ಲಿಯಲ್ಲಿರುವ ಚಬಹಾರ್ ಬಂದರಿನಲ್ಲಿ ಮಂಗಳವಾರ ಸಮರಾಭ್ಯಾಸ ಆರಂಭಗೊಳ್ಳಲಿದೆ. ಚೀನಾ, ರಶ್ಯ ಮತ್ತು ಇರಾನ್ನ ಸಮರ ನೌಕೆಗಳು, ಯುದ್ಧ ಮತ್ತು ಬೆಂಬಲ ಹಡಗುಗಳು ಪಾಲ್ಗೊಳ್ಳಲಿವೆ.
ಉತ್ತರ ಹಿಂದೂ ಮಹಾಸಾಗರದಲ್ಲಿ ಸಮರಾಭ್ಯಾಸ ನಡೆಯುತ್ತದೆ ಮತ್ತು ಈ ಪ್ರದೇಶದಲ್ಲಿ ಭದ್ರತೆಯನ್ನು ಬಲಪಡಿಸುವ ಹಾಗೂ ಪಾಲ್ಗೊಳ್ಳುವ ದೇಶಗಳ ನಡುವೆ ಬಹುಪಕ್ಷೀಯ ಸಹಕಾರವನ್ನು ವಿಸ್ತರಿಸುವ ಗುರಿ ಹೊಂದಿದೆ' ಎಂದು `ದಿ ತಾಸ್ನಿಮ್ ನ್ಯೂಸ್ ಏಜೆನ್ಸಿ' ವರದಿ ಮಾಡಿದೆ.
Next Story