ಸಾಮೂಹಿಕ ಅತ್ಯಾಚಾರ ಪ್ರಕರಣದ 5 ಮಂದಿ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಿದ ಇರಾನ್
Photo : PTI
ಟೆಹ್ರಾನ್: ಇರಾನ್ ನ ವಾಯವ್ಯ ಪ್ರಾಂತದ ಮರಾಂಡ್ ನಗರದಲ್ಲಿ ಕಳೆದ ವರ್ಷ ಮಹಿಳೆಯನ್ನು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪ ಸಾಬೀತಾದ ಬಳಿಕ ಐದು ಮಂದಿಗೆ ಬುಧವಾರ ಗಲ್ಲುಶಿಕ್ಷೆ ವಿಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2022ರ ಮೇ ತಿಂಗಳಿನಲ್ಲಿ ಈ ಪ್ರಕರಣ ನಡೆದಿದ್ದು 4 ದಿನಗಳ ಬಳಿಕ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು. ನ್ಯಾಯಾಂಗ ವಿಚಾರಣೆಯಲ್ಲಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಐದು ಮಂದಿಯನ್ನು ಗಲ್ಲಿಗೇರಿಸಲಾಗಿದೆ. ಇವರು ಈ ಹಿಂದೆಯೂ ಅಪರಾಧ ಕೃತ್ಯ ಎಸಗಿರುವ ದಾಖಲೆಯಿದೆ ಎಂದು ಇರಾನ್ನ ನ್ಯಾಯಾಂಗ ಇಲಾಖೆ ಹೇಳಿದೆ.
ಚೀನಾದ ಬಳಿಕ ಅತ್ಯಧಿಕ ಮಂದಿಯನ್ನು ಮರಣದಂಡನೆ ಶಿಕ್ಷೆಗೊಳಪಡಿಸಿರುವ ದೇಶವಾಗಿರುವ ಇರಾನ್ ಕಳೆದ ವರ್ಷ ಕನಿಷ್ಟ 582 ಮಂದಿಯನ್ನು ಗಲ್ಲಿಗೇರಿಸಿದೆ. ಈ ವರ್ಷದ ಆರಂಭದ 6 ತಿಂಗಳಲ್ಲಿ ಕನಿಷ್ಟ 282 ಮಂದಿಯನ್ನು ಗಲ್ಲಿಗೇರಿಸಲಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ವರದಿ ಮಾಡಿದೆ.
Next Story