ರಶ್ಯಕ್ಕೆ ಆಗಮಿಸಿದ ಇರಾನ್ ಅಧ್ಯಕ್ಷ

ಮಸೂದ್ ಪೆಝೆಶ್ಕಿಯಾನ್ | PC : NDTV
ಮಾಸ್ಕೋ : ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಶುಕ್ರವಾರ ರಶ್ಯಕ್ಕೆ ಭೇಟಿ ನೀಡಿದ್ದು ಉಭಯ ದೇಶಗಳ ನಡುವಿನ ಸಮಗ್ರ ಒಪ್ಪಂದವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ ಮಹತ್ವದ ಸಭೆ ನಡೆಸಲಿದ್ದಾರೆ ಎಂದು ಇರಾನ್ನ ವಿದೇಶಾಂಗ ಸಚಿವಾಲಯ ಹೇಳಿದೆ.
ಜುಲೈಯಲ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡ ನಂತರ ಪೆಝೆಶ್ಕಿಯಾನ್ ಪುಟಿನ್ರನ್ನು ಎರಡು ಬಾರಿ ಭೇಟಿಯಾಗಿದ್ದು ಶುಕ್ರವಾರ ನಡೆಯುವ ಮೂರನೇ ಭೇಟಿ ಹಾಗೂ ಸಭೆಯಲ್ಲಿ ಉಭಯ ನಾಯಕರು ವ್ಯಾಪಾರ, ಮಿಲಿಟರಿ ಸಹಕಾರ, ವಿಜ್ಞಾನ, ಶಿಕ್ಷಣ, ಸಂಸ್ಕೃತಿ ಸೇರಿದಂತೆ ಸಮಗ್ರ ಕಾರ್ಯತಂತ್ರದ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಕಳೆದ ವರ್ಷ ಇರಾನ್ `ಬ್ರಿಕ್ಸ್' ಒಕ್ಕೂಟಕ್ಕೆ ಸೇರ್ಪಡೆಗೊಂಡಿತ್ತು ಮತ್ತು ರಶ್ಯದ ಕಝಾನ್ನಲ್ಲಿ ನಡೆದಿದ್ದ ಬ್ರಿಕ್ಸ್ ಶೃಂಗಸಭೆಯಲ್ಲಿ ಪೆಝೆಶ್ಕಿಯಾನ್ ಪಾಲ್ಗೊಂಡಿದ್ದರು.
Next Story