ಹಸೀನಾ ಸರಕಾರ ಪತನಕ್ಕೆ ಸಂಚು ರೂಪಿಸಿದ್ದ ಐಎಸ್ಐ : ಗುಪ್ತಚರ ವರದಿ
ಶೇಖ್ ಹಸೀನಾ | PC : PTI
ಢಾಕಾ : ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿಸಿ ಆರಂಭಗೊಂಡಿದ್ದ ಪ್ರತಿಭಟನೆ ಉಲ್ಬಣಗೊಂಡು ಶೇಖ್ ಹಸೀನಾ ಸರಕಾರ ಪತನಗೊಳ್ಳುವುದರ ಹಿಂದೆ ಪಾಕಿಸ್ತಾನದ ಗುಪ್ತಚರ ಏಜೆನ್ಸಿ ಐಎಸ್ಐನ ಕೈವಾಡವಿರುವುದಾಗಿ ಬಾಂಗ್ಲಾದೇಶದ ಗುಪ್ತಚರ ಏಜೆನ್ಸಿ ಹೇಳಿದೆ.
ಸರಕಾರ ಪತನಗೊಳಿಸುವ ಸಂಚನ್ನು ಲಂಡನ್ನಲ್ಲಿ ಐಎಸ್ಐ ರೂಪಿಸಿತ್ತು. ಬಳಿಕ ಮಾಜಿ ಪ್ರಧಾನಿ ಖಾಲಿದಾ ಝಿಯಾ ಅವರ ಪುತ್ರ, ಬಾಂಗ್ಲಾದೇಶದ ಪ್ರಮುಖ ವಿರೋಧ ಪಕ್ಷ ಬಾಂಗ್ಲಾದೇಶ್ ನ್ಯಾಷನಲಿಷ್ಟ್ ಪಾರ್ಟಿ(ಬಿಎನ್ಪಿ) ಮುಖ್ಯಸ್ಥ ತಾರಿಕ್ ರಹಮಾನ್ ಸೌದಿ ಅರೆಬಿಯಾದಲ್ಲಿ ಐಎಸ್ಐ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು . ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಯುತ್ತಿದ್ದಾಗ ಸಾಮಾಜಿಕ ವೇದಿಕೆ `ಎಕ್ಸ್'ನಲ್ಲಿ 500ಕ್ಕೂ ಅಧಿಕ ನೆಗೆಟಿವ್ ಟ್ವೀಟ್ಗಳನ್ನು ಪೋಸ್ಟ್ ಮಾಡಿದ್ದು ಇವು ಬೆಂಕಿಗೆ ತುಪ್ಪ ಸುರಿದಿವೆ ಎಂದು ವರದಿ ಹೇಳಿದೆ.
Next Story