ಇರಾನ್ ನ ಸಂಭಾವ್ಯ ದಾಳಿ ಎದುರಿಸಲು ಇಸ್ರೇಲ್ ಸನ್ನದ್ಧ | ಮಧ್ಯಪ್ರಾಚ್ಯಕ್ಕೆ ಧಾವಿಸಿದ ಅಮೆರಿಕದ ಸೇನಾಧಿಕಾರಿ
PC : PTI
ವಾಷಿಂಗ್ಟನ್ : ಟೆಹ್ರಾನ್ ನಲ್ಲಿ ಹಮಾಸ್ ನಾಯಕ ಇಸ್ಮಾಯೀಲ್ ಹಾನಿಯೆಹ್ ಹತ್ಯೆಗೆ ಇಸ್ರೇಲ್ ವಿರುದ್ಧ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಇರಾನ್ ಪ್ರತಿಜ್ಞೆ ಮಾಡಿರುವ ಹಿನ್ನೆಲೆಯಲ್ಲಿ ಸಂಭಾವ್ಯ ದಾಳಿಯನ್ನು ಎದುರಿಸಲು ಇಸ್ರೇಲ್ ಸರ್ವ ಸನ್ನದ್ಧವಾಗಿದೆ. ಅಮೆರಿಕದ ಸೆಂಟ್ರಲ್ ಕಮಾಂಡ್ನಿ ಜನರಲ್ ಮೈಕೆಲ್ ಕುರಿಲ್ಲಾ ಮಧ್ಯಪ್ರಾಚ್ಯ ಪ್ರಾಂತ ತಲುಪಿದ್ದಾರೆ ಎಂದು ಅಮೆರಿಕದ ಸೇನಾ ಮೂಲಗಳನ್ನು ಉಲ್ಲೇಖಿಸಿ `ಆಕ್ಸಿಯೋಸ್' ವೆಬ್ಸೈಾಟ್ ವರದಿ ಮಾಡಿದೆ.
ಇಸ್ರೇಲ್-ಇರಾನ್ ನಡುವಿನ ಉದ್ವಿಗ್ನತೆ ಉಲ್ಬಣಗೊಳ್ಳುವುದಕ್ಕೆ ಮೊದಲೇ ಜನರಲ್ ಕುರಿಲ್ಲಾ ಅವರ ಮಧ್ಯಪ್ರಾಚ್ಯ ಭೇಟಿ ನಿಗದಿಯಾಗಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಈ ಭೇಟಿ ಕಾರ್ಯತಂತ್ರದ ನಡೆಯಾಗಿ ಮಹತ್ವ ಪಡೆದಿದೆ. ಈ ಹಿಂದೆ, ಎಪ್ರಿಲ್ 13ರಂದು ಇರಾನ್ನಥ ದಾಳಿಯಲ್ಲಿ ಇಸ್ರೇಲ್ನನ ರಕ್ಷಣೆಗೆ ಧಾವಿಸಿದ್ದ ಅಂತರಾಷ್ಟ್ರೀಯ ಮತ್ತು ಪ್ರಾದೇಶಿಕ ಒಕ್ಕೂಟವನ್ನು ಅವರು ಮತ್ತೆ ಸಜ್ಜುಗೊಳಿಸುವ ನಿರೀಕ್ಷೆಯಿದೆ. ಸೋಮವಾರ ಬೆಳಿಗ್ಗೆ (ಆಗಸ್ಟ್ 5) ಇರಾನ್ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.
ಜೋರ್ಡಾನ್ ಸೇರಿದಂತೆ ಹಲವು ಗಲ್ಫ್ ದೇಶಗಳಿಗೆ ಕುರಿಲ್ಲಾ ಭೇಟಿ ನೀಡುವ ನಿರೀಕ್ಷೆಯಿದೆ. ಎಪ್ರಿಲ್ 13ರಂದು ಇಸ್ರೇಲ್ ವಿರುದ್ಧದ ಇರಾನ್ ದಾಳಿಯನ್ನು ತಡೆಯುವಲ್ಲಿ ಜೋರ್ಡಾನ್ ಪ್ರಮುಖ ಪಾತ್ರ ವಹಿಸಿದ್ದು ತನ್ನ ವಾಯುಪ್ರದೇಶವನ್ನು ಬಳಸಲು ಇಸ್ರೇಲ್ ಮತ್ತು ಅಮೆರಿಕದ ಯುದ್ಧವಿಮಾನಗಳಿಗೆ ಅವಕಾಶ ನೀಡಿತ್ತು. ಈ ಬಾರಿ ಇರಾನ್ ದಾಳಿಗೆ ಲೆಬನಾನ್ ನ ಹಿಜ್ಬುಲ್ಲಾ ಕೂಡಾ ಕೈಜೋಡಿಸುವ ಸಾಧ್ಯತೆ ಇರುವುದರಿಂದ ಅಮೆರಿಕ ಮಧ್ಯಪ್ರಾಚ್ಯದಲ್ಲಿನ ತನ್ನ ಪಡೆಗಳನ್ನು ಬಲಿಷ್ಟಗೊಳಿಸಿದ್ದು ಹೆಚ್ಚುವರಿ ಸಮರನೌಕೆ, ಕ್ಷಿಪಣಿ ನಿರೋಧಕ ವ್ಯವಸ್ಥೆ, ವಾಯುರಕ್ಷಣಾ ವ್ಯವಸ್ಥೆಗಳನ್ನು ರವಾನಿಸಿದೆ. ಇರಾನ್ ಮತ್ತು ಹಿಜ್ಬುಲ್ಲಾ ಸಂಘಟಿತ ದಾಳಿ ನಡೆಸುತ್ತದೆಯೇ ಅಥವಾ ಪ್ರತ್ಯೇಕ ಕಾರ್ಯಾಚರಣೆ ನಡೆಸಲಿದೆಯೇ ಎಂಬುದು ತಿಳಿದಿಲ್ಲ. ಆದರೆ ದಾಳಿಯ ಯೋಜನೆಯನ್ನು ಅಂತಿಮಗೊಳಿಸಿ ರಾಜಕೀಯ ಮಟ್ಟದ ಅನುಮೋದನೆಗೆ ರವಾನಿಸಿರುವ ಬಗ್ಗೆ ಮಾಹಿತಿಯಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಈ ಮಧ್ಯೆ, ಅಮೆರಿಕ, ಬ್ರಿಟನ್, ಫ್ರಾನ್ಸ್ ಸೇರಿದಂತೆ ಹಲವು ದೇಶಗಳು ಲೆಬನಾನ್ನಿಂ ದ ತೆರಳುವಂತೆ ತಮ್ಮ ಪ್ರಜೆಗಳಿಗೆ ಸೂಚನೆ ರವಾನಿಸಿವೆ. ರವಿವಾರ ಬೆಳಿಗ್ಗೆ ದಕ್ಷಿಣ ಲೆಬನಾನ್ನ್ ತೈಬೆಹ್ನ ಲ್ಲಿರುವ ನೀರು ಪೂರೈಕೆ ಕೇಂದ್ರದ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿರುವುದಾಗಿ ಲೆಬನಾನ್ ಮಾಧ್ಯಮಗಳು ವರದಿ ಮಾಡಿವೆ.