ಯಾವುದೇ ಪ್ರತೀಕಾರ ದಾಳಿ ಎದುರಿಸಲು ಇಸ್ರೇಲ್ ಸನ್ನದ್ಧ : ನೆತನ್ಯಾಹು
ಬೆಂಜಮಿನ್ ನೆತನ್ಯಾಹು | PC : NDTV
ಜೆರುಸಲೇಂ : ಹಮಾಸ್ ಹಾಗೂ ಹಿಝುಲ್ಲಾ ಸಂಘಟನೆಗಳ ಉನ್ನತ ನಾಯಕರ ಹತ್ಯೆಗಳಿಗೆ ಪ್ರತೀಕಾರವಾಗಿ ತನ್ನ ವಿರುದ್ಧ ನಡೆಯುವ ಯಾವುದೇ ಅತಿಕ್ರಮಣವನ್ನು ಎದುರಿಸಲು ಇಸ್ರೇಲ್ ಸನ್ನದ್ಧವಾಗಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಿಳಿಸಿದ್ದಾರೆ.
ಆಕ್ರಮಣಾತ್ಮಕವಾಗಿರಲಿ ಅಥವಾ ರಕ್ಷಣಾತ್ಮಕವಾಗಿರಲಿ ಯಾವುದೇ ರೀತಿಯ ಸನ್ನಿವೇಶವನ್ನು ಎದುರಿಸಲು ಇಸ್ರೇಲ್ ಅತ್ಯುನ್ನತ ಮಟ್ಟದಲ್ಲಿ ಸಜ್ಜಾಗಿದ. ನಮ್ಮ ಮೇಲೆ ನಡೆಯುವ ಯಾವುದೇ ಆಕ್ರಮಣಕ್ಕೂ ಅತಿ ದೊಡ್ಡ ಬೆಲೆಯನ್ನು ತೆರಬೇಕಾಗಿ ಬರುತ್ತದೆ’’ ಎಂದು ನೆತನ್ಯಾಹು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ನಮ್ಮ ಮೇಲೆ ಯಾರು ದಾಳಿ ನಡೆಸುತ್ತಾರೋ , ಅದಕ್ಕೆ ಪ್ರತಿಯಾಗಿ ನಾವು ಮರುದಾಳಿ ನಡೆಸುತ್ತೇವೆ ಎಂದು ನೆತನ್ಯಾಹು ಹೇಳಿದ್ದಾರೆ.
ಹಿಝ್ಬಲ್ಲಾ ವರಿಷ್ಠ ಹಸನ್ ನಸ್ರುಲ್ಲಾ ಅವರು ತನ್ನ ಸಂಘಟನೆಯ ಹಿರಿಯ ಕಮಾಂಡರ್ ಫಾವದ್ ಶುಕೂರ್ರನ್ನು ಇಸ್ರೇಲ್ ಸೇನೆ ಹತ್ಯೆಗೈದಿರುವುದನ್ನು ಪ್ರತಿಕ್ರಿಯಿಸುತ್ತಾ ಇಸ್ರೇಲ್ ನಡೆಸುವ ಹತ್ಯೆಗೆ ತನ್ನ ಸಂಘಟನೆ ಕಠೋರವಾಗಿ ಪ್ರತಿಕ್ರಿಯಿಸಲಿದೆ ಎಂದು ಹೇಳಿದ್ದಾರೆ.