ಗಾಝಾ ಕದನ ವಿರಾಮ ಮಾತುಕತೆ : ಖತರ್ ಗೆ ನಿಯೋಗ ಕಳಿಸಿದ ಇಸ್ರೇಲ್
ಸಾಂದರ್ಭಿಕ ಚಿತ್ರ | PC : PTI/AP
ಟೆಲ್ ಅವೀವ್ ; ಗಾಝಾದಲ್ಲಿ ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಒಪ್ಪಂದದ ಮಾತುಕತೆಯಲ್ಲಿ ಪಾಲ್ಗೊಳ್ಳಲು ಇಸ್ರೇಲ್ ತನ್ನ ಉನ್ನತ ಮಟ್ಟದ ನಿಯೋಗವನ್ನು ಖತರ್ ರಾಜಧಾನಿ ದೋಹಾಕ್ಕೆ ಕಳುಹಿಸಿದೆ ಎಂದು `ಟೈಮ್ಸ್ ಆಫ್ ಇಸ್ರೇಲ್' ವರದಿ ಮಾಡಿದೆ.
ಇಸ್ರೇಲ್ನ ಗುಪ್ತಚರ ಏಜೆನ್ಸಿ `ಮೊಸಾದ್', ಭದ್ರತಾ ಏಜೆನ್ಸಿ `ಶಿನ್ ಬೆಟ್', ತಾಂತ್ರಿಕ ಮತ್ತು ಕಾರ್ಯಾಚರಣೆಯ ಸಂಸ್ಥೆ, ಇಸ್ರೇಲಿ ಭದ್ರತಾ ಪಡೆಗಳ ಅಧಿಕಾರಿಗಳನ್ನು ನಿಯೋಗ ಒಳಗೊಂಡಿದೆ. ಖತರ್ ನಲ್ಲಿ ನಡೆಯುವ ಮಾತುಕತೆಯಲ್ಲಿ ಪಾಲ್ಗೊಳ್ಳಲು ನಿಯೋಗಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅನುಮತಿ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಗಾಝಾದಲ್ಲಿ ಒತ್ತೆಸೆರೆಯಲ್ಲಿ ಇರುವವರ ಕುಟುಂಬದ ಪ್ರತಿನಿಧಿಗಳನ್ನು ಒಳಗೊಂಡಿರುವ `ಒತ್ತೆಯಾಳುಗಳ ಮತ್ತು ನಾಪತ್ತೆಯಾದವರ ಕುಟುಂಬದವರ ವೇದಿಕೆ' ಇದನ್ನು ಸ್ವಾಗತಿಸಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಇಸ್ರೇಲ್ ಪ್ರಧಾನಿಯನ್ನು ಆಗ್ರಹಿಸಿದೆ.
Next Story