ಸಿರಿಯಾ-ಲೆಬನಾನ್ ಗಡಿಭಾಗದಲ್ಲಿ ಹಿಜ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್ ದಾಳಿ

ಸಾಂದರ್ಭಿಕ ಚಿತ್ರ | Photo: NDTV
ಬೈರೂತ್: ಬೆಕಾ ಕಣಿವೆ ಮತ್ತು ಸಿರಿಯಾ-ಲೆಬನಾನ್ ಗಡಿಭಾಗದ ಬಳಿ ಹಿಜ್ಬುಲ್ಲಾಗಳ ಶಸ್ತ್ರಾಸ್ತ್ರ ಅಭಿವೃದ್ಧಿ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ವ್ಯವಸ್ಥೆಯನ್ನು ಗುರಿಯಾಗಿಸಿ ಗುರುವಾರ ರಾತ್ರಿ ದಾಳಿ ನಡೆಸಿರುವುದಾಗಿ ಇಸ್ರೇಲಿ ಮಿಲಿಟರಿ ಶುಕ್ರವಾರ ಹೇಳಿದೆ.
ಭೂಗತ ಶಸ್ತ್ರಾಸ್ತ್ರ ಅಭಿವೃದ್ಧಿ ಸೌಲಭ್ಯ, ಲೆಬನಾನ್ಗೆ ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಬಳಸುವ ಸೌಲಭ್ಯವನ್ನು ಗುರಿಯಾಗಿಸಿ ದಾಳಿ ನಡೆದಿದೆ. ಜತೆಗೆ, ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಗುರುವಾರ ಹಿಜ್ಬುಲ್ಲಾ ಪ್ರಯೋಗಿಸಿದ ಕಣ್ಗಾವಲು ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಲೆಬನಾನ್ನಲ್ಲಿ 2024ರ ನವೆಂಬರ್ 27ರಂದು ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಏರ್ಪಟ್ಟ ಕದನ ವಿರಾಮ ಒಪ್ಪಂದದ ಪ್ರಕಾರ 60 ದಿನಗಳೊಳಗೆ (ಅಂದರೆ 2025ರ ಜನವರಿ 26ರೊಳಗೆ) ಲೆಬನಾನ್ನಿಂದ ಇಸ್ರೇಲ್ ಪಡೆಗಳು ವಾಪಸಾಗಬೇಕು. ಆದರೆ ಈ ಗಡುವನ್ನು ಫೆಬ್ರವರಿ 18ರ ವರೆಗೆ ಮುಂದುವರಿಸಿರುವುದಾಗಿ ಅಮೆರಿಕ ಘೋಷಿಸಿದೆ.
Next Story