ಗಾಝಾದಿಂದ 98ನೇ ಪಾರಾಟ್ರೂಪರ್ಸ್ ಪಡೆಯನ್ನು ಹಿಂತೆಗೆದುಕೊಂಡ ಇಸ್ರೇಲ್
ಸಾಂದರ್ಭಿಕ ಚಿತ್ರ (PTI)
ಟೆಲ್ ಅವೀವ್ : ನುಸಿರಾತ್ನಲ್ಲಿ ಶನಿವಾರ ನಡೆದ ಒತ್ತೆಯಾಳುಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ನಂತರ, ಇಸ್ರೇಲ್ ರಕ್ಷಣಾ ಪಡೆಯ 98ನೇ ಪಾರಾಟ್ರೂಪರ್ಸ್ ಪಡೆಯನ್ನು ಗಾಝಾ ಪಟ್ಟಿಯಿಂದ ಹಿಂತೆಗೆದುಕೊಳ್ಳಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ನಾಲ್ಕು ಇಸ್ರೇಲಿ ಒತ್ತೆಯಾಳುಗಳ ರಕ್ಷಣಾ ಕಾರ್ಯಾಚರಣೆಗೆ ಮುನ್ನ, 98ನೇ ಪಾರಾಟ್ರೂಪರ್ಸ್ ಪಡೆಯು ಒತ್ತೆಯಾಗಳುಗಳಿದ್ದ ಪೂರ್ವ ಬುರೇಜ್ ಮತ್ತು ಪೂರ್ವ ದೇರ್ ಅಲ್-ಬಲಾಹ್ ಹಾಗೂ ಪೂರ್ವ ಮತ್ತು ಆಗ್ನೇಯ ನುಸಿರಾತ್ನಲ್ಲಿ ಹೊಸ ಆಕ್ರಮಣವನ್ನು ಪ್ರಾರಂಭಿಸಿತ್ತು.
Next Story