ಸಿರಿಯಾ ಗಡಿಭಾಗದ ಬಳಿ ಇಸ್ರೇಲ್ ವೈಮಾನಿಕ ದಾಳಿ
ಸಾಂದರ್ಭಿಕ ಚಿತ್ರ | Photo: NDTV
ಬೈರೂತ್ : ಲೆಬನಾನ್ ಅನ್ನು ಸಿರಿಯಾಕ್ಕೆ ಸಂಪರ್ಕಿಸುವ ಎರಡು ಪ್ರಮುಖ ಗಡಿದಾಟು(ಬಾರ್ಡರ್ ಕ್ರಾಸಿಂಗ್)ಗಳ ಮೇಲೆ ಶುಕ್ರವಾರ ಬೆಳಿಗ್ಗೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿರುವುದಾಗಿ ಲೆಬನಾನ್ ನ ಸಾರಿಗೆ ಸಚಿವರು ಹೇಳಿದ್ದಾರೆ.
ಉತ್ತರ ಲೆಬನಾನ್ ನಲ್ಲಿ ಅರಿಡಾ ಗಡಿದಾಟು ಮತ್ತು ಪೂರ್ವ ಲೆಬನಾನ್ ನ ಜೌಸಿಹ್ ಗಡಿದಾಟನ್ನು ಗುರಿಯಾಗಿಸಿ ದಾಳಿ ನಡೆದಿದೆ. ಈ ಎರಡೂ ಗಡಿದಾಟು ಸಿರಿಯಾದ ಹೋಮ್ಸ್ ನಗರವನ್ನು ಸಂಪರ್ಕಿಸುವ ಪ್ರಮುಖ ಸ್ಥಳಗಳಾಗಿವೆ ಎಂದು ಹೇಳಿಕೆ ತಿಳಿಸಿದೆ. ಈ ಎರಡು ಗಡಿದಾಟು ಮೂಲಕ ಹಿಜ್ಬುಲ್ಲಾಗಳು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿರುವ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ.
Next Story