ಗಾಝಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವಾಯು ದಾಳಿ: ಕನಿಷ್ಠ 68 ಮಂದಿ ಸಾವು
ಸಾಂದರ್ಭಿಕ ಚಿತ್ರ | Photo: PTI
ಗಾಝಾ: ಕೇಂದ್ರ ಗಾಝಾದ ಮಘಝಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಕನಿಷ್ಠ 68 ಜನರು ಮೃತಪಟ್ಟಿದ್ದಾರೆಂದು ಗಾಝಾದ ಆರೋಗ್ಯ ಸಚಿವಾಲಯ ಹೇಳಿದೆ.
ಡೇರ್ ಅಲ್-ಬಲಾಹ್ ಎಂಬಲ್ಲಿನ ಈ ಶಿಬಿರದ ಮೇಲಿನ ದಾಳಿಯಲ್ಲಿ ಮೃತಪಟ್ಟವರಲ್ಲಿ 12 ಮಂದಿ ಮಹಿಳೆಯರು ಮತ್ತು ಏಳು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಈ ಶಿಬಿರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕುಟುಂಬಗಳು ವಾಸಿಸುತ್ತಿದ್ದುದರಿಂದ ಮೃತರ ಸಂಖ್ಯೆ ಹೆಚ್ಚಾಗುವ ಭೀತಿಯಿದೆ.
ಇನ್ನೊಂದು ಹಂತದ ಕದನ ವಿರಾಮ ಮತ್ತು ಒತ್ತೆಯಾಳುಗಳ ವಿನಿಮಯಕ್ಕಾಗಿ ಈಜಿಪ್ಟ್ ಶ್ರಮಿಸುತ್ತಿರುವಂತೆಯೇ ಕ್ರಿಸ್ಮಸ್ ಮುನ್ನಾದಿನ ಈ ವಾಯು ದಾಳಿ ನಡೆದಿದೆ.
ಗಾಝಾ ಮೇಲಿನ ಇಸ್ರೇಲ್ ದಾಳಿಯಲ್ಲಿ ಇಲ್ಲಿಯ ತನಕ 8000 ಮಕ್ಕಳು ಸೇರಿದಂತೆ 20,000ಕ್ಕೂ ಅಧಿಕ ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ.
ವೆಸ್ಟ್ ಬ್ಯಾಂಕಿನ ಫೆಲೆಸ್ತೀನಿ ಭೂಭಾಗವಾಗಿರುವ ಏಸು ಕ್ರಿಸ್ತನ ಜನ್ಮಸ್ಥಳವಾದ ಬೆಥ್ಲಹೆಮ್ನಲ್ಲಿ ಕ್ರಿಸ್ಮಸ್ ಆಚರಣೆಯಲ್ಲಿ ಎಂದಿನ ಸಂಭ್ರಮವಿಲ್ಲದಂತಾಗಿದ್ದು ರಜೆಗಳನ್ನೂ ರದ್ದುಗೊಳಿಸಲಾಗಿದೆ.