ಬೈರುತ್, ಬೆಕಾ ಪ್ರಾಂತದ ಮೇಲೆ ಇಸ್ರೇಲ್ ದಾಳಿ
ಸಾಂದರ್ಭಿಕ ಚಿತ್ರ | PC : PTi
ಬೈರುತ್ : ಮಂಗಳವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನ್ ರಾಜಧಾನಿ ಬೈರುತ್ನ ದಕ್ಷಿಣದಲ್ಲಿರುವ ಕರಾವಳಿ ನಗರದ ಅಪಾರ್ಟ್ಮೆಂಟ್ ಕಟ್ಟಡ ಧ್ವಂಸಗೊಂಡಿದೆ ಎಂದು ಲೆಬನಾನ್ನ ಅಧಿಕಾರಿಗಳು ಹೇಳಿದ್ದಾರೆ.
ಬೆಕಾ ಕಣಿವೆಯ ಬಾಲ್ಬೆಕ್ ನಗರದ ಬಳಿ ಕಾರೊಂದರ ಮೇಲೆ ಮಂಗಳವಾರ ನಡೆದ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಂದು ಪ್ರತ್ಯೇಕ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಸುಮಾರು 1 ತಿಂಗಳಿಂದ ಗಡಿಭಾಗದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿ ಹಾಗೂ ವ್ಯಾಪಕ ಸ್ಫೋಟದಿಂದ 40,000ಕ್ಕೂ ಅಧಿಕ ಮನೆಗಳು ಧ್ವಂಸಗೊಂಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Next Story