ಇಸ್ರೇಲ್ ಪಡೆಯ ದಾಳಿ: ಫೆಲೆಸ್ತೀನಿ ಪ್ರಜೆ ಮೃತ್ಯು
ಸಾಂದರ್ಭಿಕ ಚಿತ್ರ Photo: PTI
ಜೆರುಸಲೇಂ: ಆಕ್ರಮಿತ ಪಶ್ಚಿಮದಂಡೆಯ ಜೆನಿನ್ ನಗರದಲ್ಲಿ ಇಸ್ರೇಲ್ ಪಡೆ ರವಿವಾರ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಕನಿಷ್ಟ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಮತ್ತೊಬ್ಬ ಗಾಯಗೊಂಡಿದ್ದಾನೆ ಎಂದು ಫೆಲೆಸ್ತೀನ್ನ ಆರೋಗ್ಯ ಸಚಿವಾಲಯ ಸೋಮವಾರ ಹೇಳಿದೆ.
ಜೆನಿನ್ನಲ್ಲಿ ಕಾರ್ಯಾಚರಿಸುತ್ತಿದ್ದ ಉಗ್ರರ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್ನ ಮಿಲಿಟರಿ ಹೇಳಿದ್ದರೆ, ಇಸ್ರೇಲ್ ಸೇನೆ ಪ್ರಯೋಗಿಸಿದ ಕ್ಷಿಪಣಿ ಮನೆಯೊಂದಕ್ಕೆ ಅಪ್ಪಳಿಸಿ ಧ್ವಂಸಮಾಡಿದೆ ಎಂದು ಸ್ಥಳೀಯರು ಹೇಳಿದ್ದಾರೆ.
Next Story