ಲೆಬನಾನ್ ನ ಖಿಯಾಮ್ ನಗರದ ಬಳಿ ತಲುಪಿದ ಇಸ್ರೇಲಿ ಟ್ಯಾಂಕ್ ಗಳು : ವರದಿ
ಸಾಂದರ್ಭಿಕ ಚಿತ್ರ | PC : NDTV
ಬೈರುತ್, ಅ.30: ಕಳೆದ ತಿಂಗಳು ದಕ್ಷಿಣ ಲೆಬನಾನ್ ನಲ್ಲಿ ಆರಂಭವಾದ ಭೂದಾಳಿಯಲ್ಲಿ ಗಮನಾರ್ಹ ಮುನ್ನಡೆ ಸಾಧಿಸಲಾಗಿದ್ದು ತನ್ನ ಟ್ಯಾಂಕ್ ಗಳು ಖಿಯಾಮ್ ನಗರದ ಹೊರವಲಯವನ್ನು ಪ್ರವೇಶಿಸಿವೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಇಸ್ರೇಲ್ ನ ಗಡಿಯಿಂದ ಸುಮಾರು 6 ಕಿ.ಮೀ ದೂರದಲ್ಲಿರುವ ಖಿಯಾಮ್ ನಗರದ ಹೊರವಲಯವನ್ನು ಇಸ್ರೇಲಿ ಪಡೆಯ ಹಲವು ಟ್ಯಾಂಕ್ ಗಳು ಪ್ರವೇಶಿಸಿದೆ. ಖಿಯಾಮ್ ಮೇಲೆ ಸರಣಿ ವೈಮಾನಿಕ ದಾಳಿ ಹಾಗೂ ಮಧ್ಯಮ ಮತ್ತು ಭಾರೀ ಶಸ್ತ್ರಾಸ್ತ್ರಗಳನ್ನು ಬಳಸಿ ಭೂದಾಳಿ ನಡೆಸಿವೆ ಎಂದು ಲೆಬನಾನ್ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ `ದಿ ನ್ಯಾಷನಲ್ ನ್ಯೂಸ್ ಏಜೆನ್ಸಿ' ವರದಿ ಮಾಡಿದೆ. ಮಾರ್ಗದರ್ಶಿ ಕ್ಷಿಪಣಿಗಳನ್ನು ಬಳಸಿ ಎರಡು ಟ್ಯಾಂಕ್ ಗಳನ್ನು ಧ್ವಂಸಗೊಳಿಸಲಾಗಿದೆ. ಖಿಯಾಮ್ ನಗರದ ದಕ್ಷಿಣ ಮತ್ತು ನೈಋತ್ಯದಲ್ಲಿ ರಾಕೆಟ್ಗಳು ಮತ್ತು ಫಿರಂಗಿಗಳ ಮೂಲಕ ಇಸ್ರೇಲ್ ಪಡೆಯ ಮೇಲೆ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಹೇಳಿದೆ.
Next Story