ಜಮ್ಮು ಮತ್ತು ಕಾಶ್ಮೀರ | ಸೋನಾಮಾರ್ಗ್ನ ಹಂಗ್ ಬಳಿ ಹಿಮಪಾತ; ಪ್ರವಾಸಿಗರ ರಕ್ಷಣೆ
Photo : videograb
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್ನ ಹಂಗ್ನ ಸಮೀಪದಲ್ಲಿ ಹಲವಾರು ಪ್ರವಾಸಿಗರು ಹಿಮಪಾತಕ್ಕೆ ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ. ಗಂದರ್ಬಾಲ್ ಜಿಲ್ಲೆಯ ಸೋನಾಮಾರ್ಗ್ ಪ್ರದೇಶದಲಿ ಶುಕ್ರವಾರ ಸಂಭವಿಸಿದ ಈ ಘಟನೆ ನಡೆದಿದ್ದು, ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಹಿಮಪಾತವು ಹಂಗ್ ಪ್ರದೇಶದ ಬಳಿ ಅಪ್ಪಳಿಸಿದ್ದರಿಂದ ಹಲವಾರು ವಾಹನಗಳು ಹಿಮದಿಂದ ಆವರಿಸಿದೆ. ಪೊಲೀಸ್, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಸ್ಥಳೀಯ ನಿವಾಸಿಗಳು. ಅಧಿಕಾರಿಗಳು ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದರು ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಎರಡು ವಾಹನಗಳ ಮೇಲೆ ಹಿಮಪಾತವು ನೇರವಾಗಿ ಅಪ್ಪಳಿಸಿದ್ದರಿಂದ ವಾಹನಗಳು ಹಿಮದಲ್ಲಿ ಸಿಲುಕಿವೆ ಎಂದು ಅಧಿಕೃತ ಮೂಲಗಳು ವರದಿ ಮಾಡಿದೆ. ರಕ್ಷಣಾ ತಂಡಗಳ ತ್ವರಿತ ಕಾರ್ಚಾರಣೆಯಿಂದ ಎಲ್ಲಾ ಪ್ರಯಾಣಿಕರನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.