ಗಾಝಾದಲ್ಲಿ ಹತರಾದ ಪತ್ರಕರ್ತರು ಉಗ್ರರ ಪರ ಕೆಲಸ ಮಾಡುತ್ತಿದ್ದರು: ಇಸ್ರೇಲ್ ಪ್ರತಿಪಾದನೆ
ಟೆಲ್‍ಅವೀವ್ : ಗಾಝಾ ಪಟ್ಟಿಯ ರಫಾಹ್ ನಗರದಲ್ಲಿ ಹತರಾದ ಅಲ್-ಜಝೀರಾದ ಇಬ್ಬರು ಪತ್ರಕರ್ತರು ಉಗ್ರರ ಪರ ಕೆಲಸ ಮಾಡುತ್ತಿದ್ದರು ಎಂದು ಇಸ್ರೇಲ್ ಸೇನೆ ಪ್ರತಿಪಾದಿಸಿದೆ.
ರವಿವಾರ ರಫಾಹ್ ನಗರಕ್ಕೆ ಕರ್ತವ್ಯದ ಮೇಲೆ ತೆರಳುತ್ತಿದ್ದ ಪತ್ರಕರ್ತರಾದ ಹಮ್ಝಾ ವಯೆಲ್ ಮತ್ತು ಮುಸ್ತಫಾ ಥುರಿಯಾ ಇಸ್ರೇಲ್‍ನ ವೈಮಾನಿಕ ದಾಳಿಯಲ್ಲಿ ಹತರಾಗಿದ್ದರು. ಈ ಬಗ್ಗೆ ಗುರುವಾರ ಹೇಳಿಕೆ ನೀಡಿರುವ ಇಸ್ರೇಲ್ ಸೇನೆ `ಮೃತಪಟ್ಟವರು ಗಾಝಾ ಮೂಲದ ಭಯೋತ್ಪಾದಕ ಸಂಘಟನೆಯ ಸದಸ್ಯರು ಮತ್ತು ಐಡಿಎಫ್(ಇಸ್ರೇಲ್ ಭದ್ರತಾ ಪಡೆ)ಯ ಮೇಲಿನ ದಾಳಿಯಲ್ಲಿ ಪಾಲ್ಗೊಂಡಿರುವುದನ್ನು ನಮ್ಮ ಗುಪ್ತಚರ ಇಲಾಖೆ ದೃಢಪಡಿಸಿದೆ. ನಮ್ಮ ಪಡೆಗಳು ದಾಳಿ ನಡೆಸುವುದಕ್ಕೂ ಮುನ್ನ ಇವರಿಬ್ಬರೂ ಐಡಿಎಫ್‍ನತ್ತ ಡ್ರೋನ್‍ಗಳನ್ನು ಉಡಾವಣೆ ಮಾಡಿದ್ದರು. ಈ ಬಗ್ಗೆ ತಮ್ಮಲ್ಲಿ ದಾಖಲೆಗಳಿವೆ' ಎಂದಿದೆ.
Next Story