ಭಾರತವನ್ನು ಬೆಂಬಲಿಸಿದ್ದಕ್ಕೆ ರಶ್ಯ ವಿರುದ್ಧ ಖಾಲಿಸ್ತಾನ್ ಗುಂಪಿನ ಪ್ರತಿಭಟನೆ
PC : PTI
ಟೊರಂಟೊ: ವಿದೇಶಗಳಲ್ಲಿ ಖಾಲಿಸ್ತಾನ್ ಗುಂಪಿನ ಪ್ರಭಾವವನ್ನು ನಿಯಂತ್ರಿಸಲು ಭಾರತಕ್ಕೆ ರಶ್ಯ ಬೆಂಬಲ ನೀಡುವುದನ್ನು ವಿರೋಧಿಸಿ ಖಾಲಿಸ್ತಾನ್ ಪ್ರತ್ಯೇಕತಾವಾದಿಗಳ ಗುಂಪು ಸಿಖ್ಸ್ ಫಾರ್ ಜಸ್ಟಿಸ್(ಎಸ್ಎಫ್ಜೆ) ನ್ಯೂಯಾರ್ಕ್ ಮತ್ತು ಟೊರಂಟೊದಲ್ಲಿನ ಭಾರತೀಯ ಕಾನ್ಸುಲೇಟ್ ಎದುರು ಪ್ರತಿಭಟನೆ ನಡೆಸಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತದ ಉನ್ನತ ಮುಖಂಡರು ಅಮೆರಿಕ, ಕೆನಡಾ ಮತ್ತು ಯುರೋಪಿಯನ್ ಯೂನಿಯನ್ಗಳಲ್ಲಿ ಖಾಲಿಸ್ತಾನ್ ಬೆಂಬಲಿಗರ ಚಟುವಟಿಕೆಯನ್ನು ಮಟ್ಟಹಾಕಲು ಬೆಂಬಲ ನೀಡುವಂತೆ ರಶ್ಯ ಅಧ್ಯಕ್ಷ ವ್ಲಾದಿಮಿರ್ಗೆ ಮನವಿ ಮಾಡಿದ್ದಾರೆ. ಅದರಂತೆ ರಶ್ಯದ ಮಾಧ್ಯಮ ವೇದಿಕೆಗಳಾದ RT (ರಶ್ಯ ಟುಡೆ), ಸ್ಪುಟ್ನಿಕ್ಗಳು ಖಾಲಿಸ್ತಾನ್ ಚಳವಳಿಯ ವಿರುದ್ಧ ಜಾಗತಿಕ ಮಟ್ಟದಲ್ಲಿ ತಪ್ಪು ಮಾಹಿತಿಯ ಪ್ರಚಾರವನ್ನು ಆರಂಭಿಸಿದೆ ಎಂದು ಎಸ್ಎಫ್ಜೆ ಆರೋಪಿಸಿದೆ.
ರಶ್ಯದ ರಾಜತಾಂತ್ರಿಕರ ಜತೆ ಸಮನ್ವಯ ಸಾಧಿಸಲು ಅಮೆರಿಕಕ್ಕೆ ಭಾರತದ ರಾಯಭಾರಿ ವಿನಯ್ ಕ್ವಾಟ್ರಾರನ್ನು ಭಾರತ ನಿಯೋಜಿಸಿದೆ. ಖಾಲಿಸ್ತಾನ್ ಪ್ರತ್ಯೇಕತಾವಾದಿಗಳ ಕುರಿತ ಮಾಹಿತಿಯನ್ನು ರಶ್ಯದ ಏಜೆನ್ಸಿಗಳು ಭಾರತದ `ರಾ' ಮತ್ತು ಎನ್ಎಸ್ಎ(ರಾಷ್ಟ್ರೀಯ ಭದ್ರತಾ ಸಂಸ್ಥೆ)ಗೆ ಒದಗಿಸುತ್ತಿವೆ ಎಂದು ಮೂಲಗಳು ಹೇಳಿವೆ.